ಶಿರಡಿ ಸಾಯಿಬಾಬಾಗೆ 28 ಲಕ್ಷ ರು. ಮೌಲ್ಯದ ಚಿನ್ನದ ಕಿರೀಟ ಅರ್ಪಿಸಿದ ಇಟಲಿ ಮಹಿಳೆ

ಇಟಲಿಯ 72 ವರ್ಷದ ಭಕ್ತೆಯೊಬ್ಬರು ಶಿರಡಿ ಸಾಯಿಬಾಬಾಗೆ ಸುಮಾರು 28 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಗುರುವಾರ....
ಸೆಲಿನಿ ಡೊಲಾರಸ್ (ಸಾಯಿ ದುರ್ಗಾ)
ಸೆಲಿನಿ ಡೊಲಾರಸ್ (ಸಾಯಿ ದುರ್ಗಾ)
ಶಿರಡಿ: ಇಟಲಿಯ 72 ವರ್ಷದ ಭಕ್ತೆಯೊಬ್ಬರು ಶಿರಡಿ ಸಾಯಿಬಾಬಾಗೆ ಸುಮಾರು 28 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಗುರುವಾರ ಕಾಣಿಕೆಯಾಗಿ ನೀಡಿದ್ದಾರೆ.
ಇಟಲಿಯ ಸೆಲಿನಿ ಡೊಲಾರಸ್ (ಸಾಯಿ ದುರ್ಗಾ) ಎಂಬ ಮಹಿಳೆ 855 ಗ್ರಾಂ ತೂಕದ ರತ್ನ ಖಚಿತವಾದ ಚಿನ್ನದ ಕಿರೀಟವನ್ನು ದೇಗುಲಕ್ಕೆ ಅರ್ಪಿಸಿದ್ದಾರೆ.
ಸಾಯಿ ದುರ್ಗಾ ಅವರು ಕಳೆದ 9 ವರ್ಷಗಳಿಂದ ಸಾಯಿಬಾಬಾ ಅವರ ಅನುಯಾಯಿಯಾಗಿದ್ದು, ಪ್ರತೀ ತಿಂಗಳೂ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಇವರು 25 ಲಕ್ಷ ರೂ. ಮೌಲ್ಯದ ಚಿನ್ನದ ಲೇಪನವಿರುವ ದಾರದಲ್ಲಿ ಪೋಣಿಸಿದ 2 ರುದ್ರಾಕ್ಷಿ ಮಾಲೆಯನ್ನು ಕಾಣಿಕೆಯಾಗಿ ನೀಡಿದ್ದರು ಎಂದು ಶ್ರೀ ಸಾಯಿಬಾಬ ಸಂಸ್ಥಾನ ಟ್ರಸ್ಟ್ರಿ ಸಚಿನ್ ತಂಬೆ ತಿಳಿಸಿದ್ದಾರೆ.
ನಾನು ಇಟಲಿಯಲ್ಲಿ ಸಾಯಿಬಾಬಾ ಅವರ ದೇವಾಲಯ ನಿರ್ಮಿಸಲು ಚಿಂತಿಸುತ್ತಿದ್ದೇನೆ. ಈ ಸಂಬಂಧ ಸಾಯಿಬಾಬಾ ಅವರ ದೇವಾಲಯದ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸುತ್ತಿದ್ದೇನೆ. ಜತೆಗೆ ದೇವಾಲಯ ನಿರ್ಮಾಣ ನಕ್ಷೆಯನ್ನು ಸಾಯಿಬಾಬಾ ಪದತಲದಲ್ಲಿ ಇರಿಸಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಸಾಯಿ ದುರ್ಗಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com