ಪರೀಕ್ಷೆ ಉತ್ತರ ಪತ್ರಿಕೆಯಲ್ಲಿ ಪ್ರೇಮಪತ್ರ, ಸಿನಿಮಾ ಹಾಡುಗಳನ್ನು ಬರೆದ ಕಾನೂನು ವಿದ್ಯಾರ್ಥಿಗಳು

ಕಾನೂನು ವಿದ್ಯಾರ್ಥಿಗಳು ಸೆಮಿಸ್ಚರ್ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪ್ರೇಮ ಪತ್ರ ಹಾಗೂ ಕಿಶೋರ್ ಕುಮಾರ್ ಅವರ ಹಿಂದಿಯ ಹಾಡುಗಳನ್ನು ಬರೆದಿರುವ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಕೊತಾ: ಕಾನೂನು ವಿದ್ಯಾರ್ಥಿಗಳು ಸೆಮಿಸ್ಚರ್ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪ್ರೇಮ ಪತ್ರ ಹಾಗೂ ಕಿಶೋರ್ ಕುಮಾರ್ ಅವರ ಹಿಂದಿಯ ಹಾಡುಗಳನ್ನು ಬರೆದಿರುವ ಘಟನೆ ಬೆಂಗಾಲ್ ಕಾಲೇಜಿನಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ ಪುರದಲ್ಲಿರುವಬಾಲೂರ್ ಘಾಟ್ ಕಾನೂನು ಕಾಲೇಜು ವಿದ್ಯಾರ್ಥಿಗಳು ಎರಡನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತರ ಬರೆಯುವ ಬದಲು ಪ್ರೇಮ ಪತ್ರ ಮತ್ತು ಹಾಡುಗಳನ್ನು ಬರೆದಿದ್ದಾರೆ. ಹೀಗಾಗಿ ಈ ಕಾಲೇಜಿನ 10 ವಿದ್ಯಾರ್ಥಿಗಳ ದಾಖಲಾತಿ  ರದ್ದು ಪಡಿಸಲು ಗೌರ್ ಬಂಗಾ ವಿವಿಯ ಪರೀಕ್ಷಾ ಮಂಡಳಿ ನಿರ್ಧರಿಸಿದೆ.

ಇತ್ತೀಚೆಗೆ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು . ಪರೀಕ್ಷೆ ಬರೆದಿದ್ದ 182 ವಿದ್ಯಾರ್ಥಿಗಳಲ್ಲಿ ಕೇವಲ 25 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ.  ಈ ಪ್ರಕರಣದಲ್ಲಿ ವಿದ್ಯಾರ್ಥಿಗಳು ಮುಗ್ಧರೋ ಅಲ್ಲವೋ ಎಂಬುದನ್ನು ಸಾಬೀತು ಪಡಿಸಲು ವಿವಿ ಅವಕಾಶ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಫೆಬ್ರವರಿ 18 ರಂದು  ವಿವಿ ಪರೀಕ್ಷಾ ಮಂಡಳಿ  ಸಭೆ ಕರೆಯಲಾಗಿದೆ.

ಕಾನೂನು ವ್ಯಾಸಂಗ ಮಾಡುವುದು ಜೋಕ್ ಅಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಇತರರಿಗೆ ಅದು ಪಾಠವಾಗಬೇಕು ಎಂದು ಗೌರ್ ಬಂಗಾ ವಿವಿ ಪ್ರೊಫೆಸರ್ ಹೇಳಿದ್ದಾರೆ.

ದಾಖಲಾತಿ ರದ್ದುಗೊಳಿಸಿಕೊಂಡಿರುವ ಈ 10 ವಿದ್ಯಾರ್ಥಿಗಳು, ಎರಡನೇ ಸೆಮಿಸ್ಟರ್ 2 ಹಾಗೂ ಸೆಮಿಸ್ಟರ್ 4 ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸಪ ಮಾಡಬೇಕೆಂದು ಒತ್ತಾಯಿಸಿ ಜನವರಿ 27 ರಂದು ಬಾಲರ್ಘಾಟ್ ಕಾನೂನು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com