ಗಡಿ ಗಸ್ತು: ಐಟಿಬಿಪಿ ಯೋಧರಿಗೆ ಸ್ನೋ ಸ್ಕೂಟರ್ ಸೌಲಭ್ಯ!

ಐಟಿಬಿಪಿ ಪಡೆಗೆ ಹಿಮ ಆವೃತ ಪ್ರದೇಶಗಳಲ್ಲಿ ಗಸ್ತು ತಿರುಗುವುದನ್ನು ಮತ್ತಷ್ಟು ಸುಲಭಗೊಳಿಸಲು ಶೀಘ್ರವೇ ಸ್ನೋ ಸ್ಕೂಟರ್ ನೀಡಲಾಗುತ್ತದೆ.
ಸ್ನೋ ಸ್ಕೂಟರ್
ಸ್ನೋ ಸ್ಕೂಟರ್
ನವದೆಹಲಿ: ಭಾರತ-ಚೀನಾ ಗಡಿಪ್ರದೇಶದಲ್ಲಿರುವ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಪಡೆಗೆ ಹಿಮ ಆವೃತ ಪ್ರದೇಶಗಳಲ್ಲಿ ಗಸ್ತು ತಿರುಗುವುದನ್ನು ಮತ್ತಷ್ಟು ಸುಲಭಗೊಳಿಸಲು ಸ್ನೋ ಸ್ಕೂಟರ್ ನೀಡಲಾಗಿದೆ. ಈ ಮಾಹಿತಿಯನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಸ್ನೋ ಸ್ಕೂಟರ್ ನಿಂದ ಐಟಿಬಿಪಿ ಪೊಲೀಸ್ ಸಿಬ್ಬಂದಿಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಲು ಅನುಕೂಲವಾಗಲಿದೆ 
ಅಮೆರಿಕಾದ ಸಂಸ್ಥೆಯಿಂದ ತಯಾರಾಗಿರುವ ಸ್ನೋ ಸ್ಕೂಟರ್ ನ ಮೊದಲ 5 ಯುನಿಟ್ ಗಳ ಸ್ನೋ ಸ್ಕೂಟರ್ ಗಳನ್ನು ಲಡಾಕ್, ಉತ್ತರಾಖಂಡ್ ಹಾಗೂ ಚೀನಾ ಸೇನೆಯನ್ನು ಗಮನಿಸಲು ಸಾಧ್ಯವಾಗುವಂತೆ ಸಿಕ್ಕೀಂ ನಲ್ಲಿ ನಿಯೋಜಿಸಲಾಗಿದೆ. ಸುಮಾರು 1 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, 45 ಡಿಗ್ರಿ ಇಳಿಜಾರಿನಲ್ಲೂ ಸಹ ಸಂಚರಿಸಬಹುದಾದ ಸಾಮರ್ಥ್ಯ ಹೊಂದಿರಲಿವೆ. ಕಪ್ಪು-ಬಿಳುಪು ಬಣ್ಣದಲ್ಲಿರಲಿರುವ ಸ್ನೋ ಸ್ಕೂಟರ್ ಗಳು ಹೈಡ್ರಾಲಿಕ್ ಬ್ರೇಕ್ ಗಳನ್ನು ಹೊಂದಿರಲಿದ್ದು, 41 ಲೀಟರ್ ಗಳಷ್ಟು ಇಂಧನವನ್ನು ತುಂಬಿಸಬಹುದಾಗಿದೆ. ಸ್ನೋ ಸ್ಕೂಟರ್ ಗಳಲ್ಲಿ ಅತ್ಯಾಧುನಿಕವಾದದ್ದನ್ನು ಭಾರತ ಸರ್ಕಾರ ಐಟಿಬಿಪಿ ಪೊಲೀಸ್ ಪಡೆಗೆ ನೀಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com