ಸಮಾಜವಾದಿ ಪಕ್ಷದ ಶಾಸಕನ ವಿರುದ್ಧ ರೇಪ್ ಆರೋಪ ಮಾಡಿದ್ದ ಮಹಿಳೆ ಶವವಾಗಿ ಪತ್ತೆ

ಸಮಾಜವಾದಿ ಪಕ್ಷದ ಶಾಸಕಅರುಣ್ ವರ್ಮಾ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆ ಆಕೆಯ ಮನೆಯ ಪಕ್ಕದಲ್ಲಿ ಶವವಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಲಕ್ನೋ: ಸಮಾಜವಾದಿ ಪಕ್ಷದ ಶಾಸಕಅರುಣ್ ವರ್ಮಾ ವಿರುದ್ಧ ಅತ್ಯಾಚಾರಆರೋಪ ಮಾಡಿದ್ದ ಮಹಿಳೆ ಆಕೆಯ ಮನೆಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಶನಿವಾರದಿಂದ ಮಹಿಳೆ ನಾಪತ್ತೆಯಾಗಿದ್ದರು.ಜೈಸಿಂಗ್ ನಲ್ಲಿರುವ ಆಕೆಯ ಮನೆಯ ಪಕ್ಕದಲ್ಲಿರುವ ಪ್ರಾಥಮಿಕ ಶಾಲೆಯ ಬಳಿ ಮಹಿಳೆ ಶವ ಪತ್ತೆಯಾಗಿದೆ ಎಂದು ಸುಲ್ತಾನ್ ಪುರ ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಎಫ್ ಐಆರ್ ಕೂಡ ದಾಖಲಾಗಿದೆ.

ಆಕೆಯ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳಿದ್ದು ಯಾರೋ ಕತ್ತು ಹಿಸುಕಿ ಕೊಂದಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

2013 ರ ಸೆಪ್ಟಂಬರ್ ನಲ್ಲಿ ಸಮಾಜವಾದಿ ಪಕ್ಷದ ಶಾಸಕ ಅರುಣ್ ವರ್ಮಾ ಮತ್ತಿತರ ಯುವಕರೊಂದಿಗೆ ಸೇರಿ ತನ್ನ ಮೇಲೆ ಅತ್ಯಾತಾರ ನಡೆಸಿದ್ದರು ಎಂದು ಮಹಿಳೆ ದೂರಿದ್ದರು.ಅರುಣ್ ವರ್ಮಾ ಸದ್ಯ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಸ್ಸಿ ಸ್ಪರ್ಧಿಸಿದ್ದಾರೆ, ಫೆಬ್ರವರಿ 27 ರಂದು ಮತದಾನ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com