
ಚೆನ್ನೈ: ನಾನು ಎಲ್ಲಿದ್ದರೂ ಪಕ್ಷದ ಚಟುವಟಿಕೆಗಳನ್ನು ಸದಾ ಗಮನಿಸುತ್ತಾ ಇರುತ್ತೇನೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹೇಳಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ತನ್ನ ನಿಷ್ಠಾವಂತ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಶಶಿಕಲಾ, ಭವಿಷ್ಯದಲ್ಲಿ ಪಕ್ಷದ ಗತಿಯೇನು ಎಂದು ಶಾಸಕರ ಪ್ರಶ್ನೆಗೆ ಉತ್ತಿರಿಸಿದ ಅವರು ನೀವೆಲ್ಲಾ ಒಗ್ಗಟ್ಟಾಗಿದ್ದಾರೆ ನನಗೆ ಯಾವುದೇ ಚಿಂತೆಯಿಲ್ಲ, ನಾನು ಶಿಕ್ಷೆಗೊಳಗಾಗಿ ಜೈಲು ಸೇರಬಹುದು ಆದರೇ ನನ್ನ ಮನಸ್ಸನ್ನು ಯಾರು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಎಐಎಡಿಎಂಕೆಯಿಂದ ನನ್ನನ್ನು ಬೇರ್ಪಡಿಸಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ, ನಾನು ಎಲ್ಲೇ ಇರಲಿ, ರಾಜ್ಯದಲ್ಲಿರಲಿ ಅಥವಾ ಹೊರರಾಜ್ಯದಲ್ಲಿರಲಿ, ನನ್ನ ಯೋಚವೆಗಳು ಯಾವಾಗಲೂ ಪಕ್ಷದ ಬಗ್ಗೆಯೇ ಇರುತ್ತವೆ ಎಂದು ಶಶಿಕಲಾ ಹೇಳಿದ್ದಾರೆ.
ನೀವೆಲ್ಲರೂ ಒಗ್ಗಟ್ಟಾಗಿ ಇರಬೇಕಾದ ಪರಿಸ್ಥಿತಿ ಇದಾಗಿದೆ. ಮುಂದಿನ ಸರ್ಕಾರ ರಚನೆಗಾಗಿ ನೀವೆಲ್ಲಾ ಒಟ್ಟಿಗೆ ಇರಬೇಕು ಎಂದು ಶಾಸಕರಿಗೆ ಶಶಿಕಲಾ ಸೂಚಿಸಿದ್ದಾರೆ.
ಬೇರೆ ಕ್ಯಾಂಪ್ ಗೆ ವಿವಿದೆಡೆಯಿಂದ ಬೆಂಬಲ ಸಿಗಬಹುದು, ಆದರೆ ನಾವು ಮಾತ್ರ ಶಾಸಕರಿಗೆ ಬೆಂಬಲ ಸೂಚಿಸಬೇಕು. ಹಲವು ದಿನಗಳಿಂದ ನಾವು ತಾಳ್ಮೆಯಿಂದ ಇದ್ದೇವೆ, ರಾಜ್ಯಪಾಲರು ಶೀಘ್ರವೇ ನಮ್ಮನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ ಎಂದು ಶಶಿಕಲಾ ಶಾಸಕರಿಗೆ ಅಭಯ ಹಸ್ತ ನೀಡಿದ್ದಾರೆ.
Advertisement