ಬಿಜೆಪಿ ನಾಯಕರು ಭ್ರಷ್ಟರೆಂದು ಯಾರು ಬೆಟ್ಟು ಮಾಡಿ ತೋರಿಸಲಾಗಲ್ಲ: ರಾಜನಾಥ್ ಸಿಂಗ್

ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭರ್ಜರಿ ಜಯ ಗಳಿಸಲಿದೆ ಎಂಬ ಭರವಸೆಯಲ್ಲಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಯಾರು...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on
ಇಂಫಾಲ(ಮಣಿಪುರ): ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭರ್ಜರಿ ಜಯ ಗಳಿಸಲಿದೆ ಎಂಬ ಭರವಸೆಯಲ್ಲಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಯಾರು ಸಹ ಬಿಜೆಪಿ ನಾಯಕರು ಭ್ರಷ್ಟರೆಂದು ಬೆಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಯಾವುದೇ ಭ್ರಷ್ಟಚಾರದಲ್ಲಿ ತೊಡಗಿಲ್ಲ ಎಂದು ಸಂಪೂರ್ಣ ವಿಶ್ವಾಸದಿಂದ ಹೇಳುತ್ತೇನೆ ಎಂದರು. 
ಇದೇ ವೇಳೆ ಮಣಿಪುರ ಅಭಿವೃದ್ಧಿಗೆ ಬೇಕಾದ ಸಂಪೂರ್ಣ ಸಹಕಾರ ಕೇಂದ್ರ ಸರ್ಕಾರ ನೀಡಲಿದೆ. ಜತೆಗೆ ಈಶಾನ್ಯ ರಾಜ್ಯಕ್ಕೆ ರೈಲು ಮತ್ತು ರಸ್ತೆಗಳು ಅಗತ್ಯವಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 
ಮಾರ್ಚ್ 4 ಮತ್ತು 8ರಂದು ಎರಡು ಹಂತದಲ್ಲಿ 60 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ಮಾರ್ಚ್ 11 ರಂದು ಮತ ಎಣಿಕೆ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com