ಝಾಕೀರ್ ನಾಯಕ್ ಗೆ ದಾವೂದ್ ನಂಟು: ಎನ್ ಜಿ ಒಗೆ ಭೂಗತ ಪಾತಕಿಯ ಹವಾಲಾ ಹಣ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ತನ್ನ ಹವಾಲಾ ಹಣವನ್ನು ಝಾಕೀರ್ ನಾಯಕ್ ಎನ್ ಜಿಒ ಇಸ್ಲಾಮಿಕ್ ರಿಸೆರ್ಚ್ ಫೌಂಡೇಶನ್ ಗೆ ಬಳಕೆ ಮಾಡುತ್ತಿದ್ದಾನೆ ಎಂಬ ...
ಝಾಕೀರ್ ನಾಯಕ್ ಮತ್ತು ದಾವೂದ್ ಇಬ್ರಾಹಿಂ
ಝಾಕೀರ್ ನಾಯಕ್ ಮತ್ತು ದಾವೂದ್ ಇಬ್ರಾಹಿಂ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ತನ್ನ ಹವಾಲಾ ಹಣವನ್ನು ಝಾಕೀರ್ ನಾಯಕ್ ಎನ್ ಜಿಒ ಇಸ್ಲಾಮಿಕ್ ರಿಸೆರ್ಚ್ ಫೌಂಡೇಶನ್ ಗೆ ಬಳಕೆ ಮಾಡುತ್ತಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಝಾಕೀರ್ ನಾಯಕ್  ನ ಎನ್ ಜಿಓ ಗೆ ದಾವೂದ್ ಇಬ್ರಾಹಿಂ ಹಣಕಾಸು ಸಹಾಯ ನೀಡುತ್ತಿದ್ದಾನೆ ಎಂದು ಝಾಕೀರ್ ನ ಮುಖ್ಯ ಹಣಕಾಸು ಅಧಿಕಾರಿ ಆಮೀರ್ ಗಜ್ದಾರ್ ಹೇಳಿದ್ದಾರೆ.

ಮಧ್ಯವರ್ತಿ ಸುಲ್ತಾನ್ ಅಹ್ಮದ್ ಎಂಬಾತನ ಮೂಲಕ ಹವಾಲಾ ಹಣವನ್ನು  ಝಾಕೀರ್ ನಾಯಕ್ ನ ಇಸ್ಲಾಮಿಕ್ ರಿಸೇರ್ಚ್ ಸೆಂಟರ್ ಗೆ ನೀಡಲಾಗುತ್ತಿದೆ ಆಮೀರ್ ಗಜ್ದಾರ್ ತಿಳಿಸಿದ್ದಾನೆ.

ಫೆಬ್ರವರಿ 18 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು 48 ವರ್ಷದ ಗಾಜ್ದಾರ್ ನನ್ನು ಬಂಧಿಸಿದ್ದರು. ಸುಮಾರು 200 ಕೋಟಿ ರುಗಳಷ್ಟು ಹಣದ ವಹಿವಾಟು ನಡೆದಿದೆ ಎಂದು ಇಡಿ ಅಧಿಕಾರಿಗಳು ಶಂಕಿಸಿದ್ದಾರೆ. ಈ ಮಾಹಿತಿ ಝಾಕೀರ್ ನಾಯಕ್ ಗೆ ಪಾಕಿಸ್ತಾನ ಮತ್ತು ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಇದೆ ಎಂಬುದನ್ನು ಸ್ಪಷ್ಟ ಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com