ಜಮ್ಮು: ರಾಜೌರಿಯಲ್ಲಿ ಗುಂಡಿನ ಚಕಮಕಿ; ಓರ್ವ ಉಗ್ರನ ಹತ್ಯೆ

ಗಡಿ ಭದ್ರತಾ ಪಡೆ ಮಂಗಳವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಉಗ್ರಗಾಮಿಗಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಶ್ರೀನಗರ: ಗಡಿ ಭದ್ರತಾ ಪಡೆ ಮಂಗಳವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಉಗ್ರಗಾಮಿಗಳ ಒಳನುಸುಳುವಿಕೆಯನ್ನು ವಿಫಲಗೊಳಿಸುವ ಯತ್ನದಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.
ಉಗ್ರಗಾಮಿಗಳು ಮತ್ತು ಬಿಎಸ್ಎಫ್ 163 ಬ್ಯಾಟಲಿಯನ್ ಭದ್ರತಾ ಪಡೆ ಯೋಧರ ನಡುವೆ ರಾಜೌರಿಯ ಕೇರಿ ವಲಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಮೃತಪಟ್ಟಿದ್ದಾನೆ. ಇನ್ನಿಬ್ಬರು  ಉಗ್ರರು ತಪ್ಪಿಸಿಕೊಂಡು ಓಡಿಹೋಗಿದ್ದಾರೆ.
ಈ ತಿಂಗಳ  ಆರಂಭದಲ್ಲಿ ಪಾಕಿಸ್ತಾನ ಗಡಿಯಿಂದ ಭಾರತದೊಳಗೆ ನುಸುಳಲು ಸಹಾಯಕವಾಗುವಂತೆ 20 ಮೀಟರ್ ಸುರಂಗ ತೋಡಿ ಉಗ್ರರು ಒಳನುಸುಳಿದ್ದರು. ಸಾಂಬಾ ವಲಯದ ರಾಮ್ ಗರ್ ನಲ್ಲಿ ಯೋಧರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಸುರಂಗ ಪತ್ತೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com