ಸೋಲಾರ್ ಪಾರ್ಕ್ ಗಳ ಸಾಮರ್ಥ್ಯ ದ್ವಿಗುಣಗೊಳಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆ
ದೇಶ
ಸೋಲಾರ್ ಪಾರ್ಕ್ ಗಳ ಸಾಮರ್ಥ್ಯ ದ್ವಿಗುಣಗೊಳಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆ
ಫೆ.22 ರಂದು ಕೇಂದ್ರ ಸಚಿವ ಸಂಪುಟ ಸಭೆ ಸೋಲಾರ್ ಪಾರ್ಕ್ ಹಾಗೂ ಯೋಜನೆಗಳ ಸಾಮರ್ಥ್ಯವನ್ನು 20,000 ಮೆಗಾ ವ್ಯಾಟ್ ನಿಂದ 40,000 ಮೆ.ವ್ಯಾ ಗೆ ಏರಿಕೆ ಮಾಡಲು ಅನುಮೋದನೆ ನೀಡಿದೆ.
ನವದೆಹಲಿ: ಸೌರಶಕ್ತಿ ಉತ್ತೇಜನಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಫೆ.22 ರಂದು ಕೇಂದ್ರ ಸಚಿವ ಸಂಪುಟ ಸಭೆ ಸೋಲಾರ್ ಪಾರ್ಕ್ ಹಾಗೂ ಯೋಜನೆಗಳ ಸಾಮರ್ಥ್ಯವನ್ನು 20,000 ಮೆಗಾ ವ್ಯಾಟ್ ನಿಂದ 40,000 ಮೆ.ವ್ಯಾ ಗೆ ಏರಿಕೆ ಮಾಡಲು ಅನುಮೋದನೆ ನೀಡಿದೆ.
ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ತಲಾ 500 ಮೆ.ವ್ಯಾ ಸಾಮರ್ಥ್ಯದ ಕನಿಷ್ಠ 50 ಸೋಲಾರ್ ಪಾರ್ಕ್ ಗಳು ಹೊಸದಾಗಿ ದೇಶದ ವಿವಿಧ ಭಾಗಗಳಲ್ಲಿ ಸ್ಥಾಪನೆಯಾಗಲಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ರಾಜ್ಯಗಳಿಂದ ಹೆಚ್ಚುವರಿ ಸೋಲಾರ್ ಪಾರ್ಕ್ ಗಳ ಸ್ಥಾಪನೆಗಾಗಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದು, 8,100 ಕೋಟಿ ರೂಪಾಯಿ ವೆಚ್ಚದಲ್ಲಿ 2019-20 ವೇಳೆಗೆ ಸೋಲಾರ್ ಪಾರ್ಕ್ ಹಾಗೂ ಉಲ್ಟ್ರಾ ಮೆಗಾ ಸೋಲಾ ಪವರ್ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ