ಸಚಿವ ಅಶೋಕ್ ಗಜಪತಿ ರಾಜು
ಸಚಿವ ಅಶೋಕ್ ಗಜಪತಿ ರಾಜು

ಸ್ಕೈರೆವ್ 360ಗೆ ನಾಗರಿಕ ವಿಮಾನಯಾನ ಖಾತೆ ಸಚಿವ ಚಾಲನೆ

ದೇಶದ ಗಡಿಭಾಗ ಹೊರತುಪಡಿಸಿ ನೆರವು ಮತ್ತು ಸುರಕ್ಷತಾ ಸೇವೆಗಳಿಗೆ, ವಾಯು-ನೌಕಾ ಸೇವೆಗಳಿಗೆ...
Published on
ನವದೆಹಲಿ: ದೇಶದ ಗಡಿಭಾಗ ಹೊರತುಪಡಿಸಿ ನೆರವು ಮತ್ತು ಸುರಕ್ಷತಾ ಸೇವೆಗಳಿಗೆ, ವಾಯು-ನೌಕಾ ಸೇವೆಗಳಿಗೆ, ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ವಿದೇಶದಲ್ಲಿ ಕಾರ್ಯನಿರ್ವಹಣೆಗೆ, ರಫ್ತು ಸೇವೆ, ನಿರ್ವಹಣಾ ಸೇವೆ, ನಿರ್ಮಾಣ, ಸಲಹೆಗಳನ್ನು ಒದಗಿಸಲು ಜಾಗತಿಕ ವಾಯುಯಾನ ಮಾರುಕಟ್ಟೆಯ ಅವಕಾಶಗಳನ್ನು ತೆರೆದು ಹೊಸ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ವಿಮಾನ ನಿಲ್ದಾಣ ಪ್ರಾಧಿಕಾರ ಆಶಾವಾದ ಹೊಂದಿದೆ.
ಮುಂದಿನ ದಿನಗಳಲ್ಲಿ ವಾಣಿಜ್ಯ ಚಟುವಟಿಕೆಗಳ ವಿಸ್ತರಣೆಗೆ ವೈಮಾನಿಕೇತರ ಆದಾಯವನ್ನು ಹೆಚ್ಚಿಸಲು ಪ್ರಾಧಿಕಾರ ಬಯಸುತ್ತಿದೆ. ಇದಕ್ಕಾಗಿ ಪ್ರಾಧಿಕಾರ ಅಂತರರಾಷ್ಟ್ರೀಯ ವಾಯು ಸಾರಿಗೆ ಅಸೋಸಿಯೇಷನ್ ಜೊತೆಗೆ ಸವಿಸ್ತಾರವಾದ ಇ-ಬಿಲ್ಲಿಂಗ್ ಪರಿಹಾರವನ್ನು ಕಂಡುಕೊಂಡಿದೆ. ಅಂಕಿಅಂಶಗಳ ಸಂಗ್ರಹ, ಇನ್ವಾಯ್ಸಿಂಗ್ ಮತ್ತು ಸಂಗ್ರಹಣೆಗೆ 'ಸ್ಕೈರೆವ್ 360' ಎಂದು ಕರೆಯುತ್ತಾರೆ.
ಸ್ಕೈರೆವ್ 360ಯನ್ನು ಜಾಗತಿಕ ಮಟ್ಟದಲ್ಲಿ ಇಂದು ನಾಗರಿಕ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು ಉದ್ಘಾಟಿಸಿದರು. 

X

Advertisement

X
Kannada Prabha
www.kannadaprabha.com