ನಿನ್ನೆ ಸಂಜೆ ಶೋಭಾ ಡೇ ಸ್ಥೂಲಕಾಯದ ಪೊಲೀಸರೊಬ್ಬರ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕಿ ಇಂದು ನಗರದಲ್ಲಿ ಭಾರೀ ಬಂದೋಬಸ್ತ್ ಎಂದು ಕ್ಯಾಪ್ಷನ್ ಹಾಕಿದ್ದರು. ಮೂರು ಗಂಟೆ ಕಳೆದ ನಂತರ ಮುಂಬೈ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಅದಕ್ಕೆ ಉತ್ತರ ಬಂತು. ''ನಾವು ತಮಾಷೆಯನ್ನು ಇಷ್ಟಪಡುತ್ತೇವೆ ಶೋಭಾ ಡೇಯವರೇ. ಆದರೆ ಇದು ಮಾತ್ರ ಸಂಪೂರ್ಣ ತಪ್ಪು. ಜವಾಬ್ದಾರಿಯುತ ಪ್ರಜೆಗಳಾದ ನಿಮ್ಮಂತವರಿಂದ ನಾವು ಒಳ್ಳೆಯದನ್ನು ನಿರೀಕ್ಷಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.