ನಾಗಾಲ್ಯಾಂಡ್ ನೂತನ ಮುಖ್ಯಮಂತ್ರಿಯಾಗಿ ಶುರ್ಹೊಝ್ಲೀ ಪ್ರಮಾಣ

ನಾಗಾ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶುರ್ಹೊಝ್ಲೀ ಲೀಝಿತ್ಸು ಅವರು ಬುಧವಾರ ನಾಗಾಲ್ಯಾಂಡ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶುರ್ಹೊಝ್ಲೀ ಲೀಝಿತ್ಸು
ಶುರ್ಹೊಝ್ಲೀ ಲೀಝಿತ್ಸು
ಕೊಹಿಮಾ: ನಾಗಾ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶುರ್ಹೊಝ್ಲೀ ಲೀಝಿತ್ಸು ಅವರು ಬುಧವಾರ ನಾಗಾಲ್ಯಾಂಡ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರು 81 ವರ್ಷದ ಶುರ್ಹೊಝ್ಲೀ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಇತ್ತೀಚಿಗೆ ನಡೆದ ಕ್ಷೀಪ್ರ ರಾಜಕೀಯ ಬೆಳವಣಿಗೆಯಲ್ಲಿ ವಿಧಾಸಭೆ ಸದಸ್ಯರಲ್ಲದ ಶುರ್ಹೊಝ್ಲೀ ಅವರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಮುಂದಿನ ಆರು ತಿಂಗಳಲ್ಲಿ ಅವರು ನಾಗಾಲ್ಯಾಂಡ್ ವಿಧಾಸಭೆಗೆ ಆಯ್ಕೆಯಾಗಬೇಕಾಗಿದೆ.
ಕಳೆದ ಸೋಮವಾರ 60 ಸದಸ್ಯಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಡೆಮಾಕ್ರೆಟಿಕ್ ಅಲಯನ್ಸ್ ಆಫ್ ನಾಗಾಲ್ಯಾಂಡ್ (ಡಿಎಎನ್) ರಂಗದ 59 ಶಾಸಕರು ಶುರ್ಹೊಝ್ಲೀ ಲೀಝಿಟ್ಸು ಅವರಿಗೆ ಬೆಂಬಲ ಸೂಚಿಸಿದ್ದರು. ಹಿನ್ನೆಲೆಯಲ್ಲಿ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರು ಶುರ್ಹೊಝ್ಲೀ ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಿದ್ದರು.
ಬಿಜೆಪಿ, ನಾಗಾ ಫ್ರಂಟ್, ಪಕ್ಷೇತರರು ಸೇರಿಕೊಂಡು 'ಡಿಎಎನ್' ರಚಿಸಿಕೊಂಡಿದ್ದಾರೆ. ಬಿಜೆಪಿಗೆ ಆಪ್ತನಾಗಿರುವ ಮಾಜಿ ಸಿಎಂ, ನಾಗಾ ಫ್ರಂಟ್ ಸಂಸದ ನೆಫ್ಯೂ ರಿಯೋ ಸಿಎಂ ಆಗಬಹುದು ಎನ್ನಲಾಗಿತ್ತಾದರೂ ಅಂತಿಮ ಕ್ಷಣದಲ್ಲಿ ಅವರು ಹಿಂದೆ ಸರಿದರು.
ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾಚಾರದ ಕಾರಣ ಶಾಸಕರು ಬಂಡೆದ್ದಿದ್ದು, ಸಿಎಂ ಹುದ್ದೆಗೆ ಟಿ.ಆರ್. ಝೆಲಿಯಾಂಗ್ ಫೆ.19 ರಂದು ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com