ಮಹಾಶಿವರಾತ್ರಿ ಹಿನ್ನೆಲೆ ಜನತೆಗೆ ಶುಭಕೋರಿದ ಜಮ್ಮು-ಕಾಶ್ಮೀರ ಸಿಎಂ

ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಮಹಾಶಿವರಾತ್ರಿ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ
ಜಮ್ಮು: ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಮಹಾಶಿವರಾತ್ರಿ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. 
ಕಾಶ್ಮೀರ ಕಣಿವೆಯಲ್ಲಿ ಶಿವರಾತ್ರಿಗೂ ಮುನ್ನ ಹೈರಾತ್ ಆಚರಣೆ ಸಂಪ್ರದಾಯವಿದ್ದು, ಮೆಹಬೂಬಾ ಮುಫ್ತಿ ಶುಭಾಶಯ ವಿನಿಮಯ ಮಾಡಿದ್ದಾರೆ. ಮಹಾಶಿವರಾತ್ರಿಯ ಪವಿತ್ರ ದಿನದ ಸಂದರ್ಭದಲ್ಲಿ ಕಾಶ್ಮೀರ ಕಣಿವೆ ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಹೊಸ ಯುಗ ಕಾಣುವಂತಾಗಲಿ ಎಂದು ಮೆಹಬೂಬಾ ಮುಫ್ತಿ ಆಶಯ ವ್ಯಕ್ತಪಡಿಸಿದ್ದಾರೆ. 
ಮಹಾಶಿವರಾತ್ರಿ ಕಾಶ್ಮೀರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದ್ದು, ಎಲ್ಲಾ ಜನತೆಯೂ ಶಿವರಾತ್ರಿಯನ್ನು ಆಚರಿಸುತ್ತಾರೆ. ಶಿವರಾತ್ರಿ ಅಂಗವಾಗಿ ಕಾಶ್ಮೀರಿ ಹಿಂದೂಗಳು ಭಾವೈಕ್ಯತೆಯಿಂದ ಹೈರಾತ್ ನ್ನು ಆಚರಿಸುತ್ತಾರೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com