ರಾಹುಲ್ ’ಅಪ್ರಬುದ್ಧ’ ಹೇಳಿಕೆಗೆ ಶೀಲಾ ದೀಕ್ಷಿತ್ ಸ್ಪಷ್ಟನೆ

ರಾಹುಲ್ ಗಾಂಧಿ ಇನ್ನೂ ಅಪ್ರಬುದ್ಧ, ಪ್ರೌಢಿಮೆ ಬೆಳೆಸಿಕೊಳ್ಳಲು ಸ್ವಲ್ಪ ಸಮಯಾವಕಾಶ ನೀಡಿ ಎಂದಿದ್ದ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್, ಈಗ ಉಲ್ಟಾ ಹೊಡೆದಿದ್ದಾರೆ.
ಶೀಲಾ ದೀಕ್ಷಿತ್
ಶೀಲಾ ದೀಕ್ಷಿತ್
ನವದೆಹಲಿ: ರಾಹುಲ್ ಗಾಂಧಿ ಇನ್ನೂ ಅಪ್ರಬುದ್ಧ, ಪ್ರೌಢಿಮೆ ಬೆಳೆಸಿಕೊಳ್ಳಲು ಸ್ವಲ್ಪ ಸಮಯಾವಕಾಶ ನೀಡಿ ಎಂದಿದ್ದ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್, ಈಗ ಉಲ್ಟಾ ಹೊಡೆದಿದ್ದು, ರಾಹುಲ್ ಗಾಂಧಿ ಪ್ರಬುದ್ಧ ನಾಯಕನಲ್ಲಿರಬೇಕಾದ ಸೂಕ್ಷ್ಮತೆಯನ್ನು ಹೊಂದಿದ್ದಾರೆ ಎಂದಿದ್ದಾರೆ. 
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರಾಹುಲ್ ಗಾಂಧಿ ಇನ್ನೂ ಅಪ್ರಬುದ್ಧ ನಾಯಕ, ಪ್ರಬುದ್ಧತೆ ಬೆಳೆಸಿಕೊಳ್ಳಲು ಸ್ವಲ್ಪ ಸಮಾಯವಕಾಶ ನೀಡಿ ಎಂದಿದ್ದರು. ಶೀಲಾ ದೀಕ್ಷಿತ್ ಅವರ ಹೇಳಿಕೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ, ಉತ್ತರ ಪ್ರದೇಶ ಚುನಾವಣೆಗೆ ಅಪ್ರಬುದ್ಧ ನಾಯಕನ ಮೇಲೆ ಏಕೆ ಅವಲಂಬಿತರಾಗಿದ್ದೀರಿ ಎಂದು ಪ್ರಶ್ನಿಸಿತ್ತು.
ಅಪ್ರಬುದ್ಧ ಹೇಳಿಕೆ ನಂತರ ವ್ಯಕ್ತವಾದ ಟೀಕೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶೀಲಾ ದೀಕ್ಷಿತ್, ನನ್ನ ಮಾತನ್ನು ತಪ್ಪಾಗಿ ಅರ್ಥೈಸಬೇಡಿ (Don't twist my words) ಎಂಬ ಹ್ಯಾಷ್ ಟ್ಯಾಗ್ ನ್ನು ಬಳಸಿ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದು, ರಾಹುಲ್ ಗಾಂಧಿ ಪ್ರಬುದ್ಧ ನಾಯಕನಲ್ಲಿರಬೇಕಾದ ಸೂಕ್ಷ್ಮತೆಯನ್ನು ಹೊಂದಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com