ಮಾಸ್ಟರ್ ಮೈಂಡ್ ಸಫ್ದರ್ ನಗೊರಿ ಸೇರಿ 11 ಮಂದಿ ಸಿಮಿ ಭಯೋತ್ಪಾದಕರಿಗೆ ಜೀವಾವಧಿ ಶಿಕ್ಷೆ

ಮಾಸ್ಟರ್ ಮೈಂಡ್ ಸಫ್ದಾರ್ ನಗೊರಿ ಸೇರಿದಂತೆ 11 ಮಂದಿ ಸಿಮಿ ಭಯೋತ್ಪಾದಕರಿಗೆ ಇಂದೋರ್...
ಸಫ್ದರ್ ನಗೊರಿ (ಸಂಗ್ರಹ ಚಿತ್ರ)
ಸಫ್ದರ್ ನಗೊರಿ (ಸಂಗ್ರಹ ಚಿತ್ರ)
ಇಂದೋರ್: ಮಾಸ್ಟರ್ ಮೈಂಡ್ ಸಫ್ದಾರ್ ನಗೊರಿ ಸೇರಿದಂತೆ 11 ಮಂದಿ ಸಿಮಿ ಭಯೋತ್ಪಾದಕರಿಗೆ ಇಂದೋರ್ ಜಿಲ್ಲಾ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಶಸ್ತ್ರಾಸ್ತ್ರಗಳನ್ನು ಹೊಂದಿರುವುದು, ಸ್ಫೋಟಕಗಳು ಸಾಮಗ್ರಿ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗೆ ಸಂಚು ಹೂಡಿದ ಅಪರಾಧಗಳಿಗೆ ಸಂಬಂಧಪಟ್ಟಂತೆ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಮಾರ್ಚ್ 2008ರಲ್ಲಿ ವಿಶೇಷ ಕಾರ್ಯಪಡೆ ಬಂಧಿಸಿದ ನಂತರ ಇಂದೋರ್ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ವಿಚಾರಣೆ ನಡೆಯುತ್ತಿತ್ತು.
ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ(ಸಿಮಿ)ಯ ಮುಖ್ಯ ರೂವಾರಿ ಸಫ್ದರ್ ನಗೊರಿಯಾಗಿದ್ದನು. 2008ರಲ್ಲಿ ಇಂದೋರ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಮುಖ್ಯ ಸೂತ್ರದಾರಿಯಾಗಿದ್ದನು. ಜುಲೈ 26, 2008ರಲ್ಲಿ ನಡೆದ ದಾಳಿಯಲ್ಲಿ 57 ಮಂದಿ ಮೃತಪಟ್ಟಿದ್ದರು. ಈ ದಾಳಿಯ ಹಿಂದಿನ ನಿಜವಾದ ಕೈ ಇಂಡಿಯನ್ ಮುಜಾಹಿದ್ದೀನ್ ಗುಂಪಿನದ್ದು. ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗೊರಿಯನ್ನು ಅಹಮದಾಬಾದಿನ ಸಬರ್ಮತಿ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿಡಲಾಗಿತ್ತು. 

ವಿದ್ಯಾರ್ಥಿ ಸಂಘಟನೆಯಾಗ ಸಿಮಿಯನ್ನು 2011ರಲ್ಲಿ ನಿಷೇಧಿಸಲಾಗಿತ್ತು. ನಗೊರಿ ವಿರುದ್ಧ 1997ರಲ್ಲಿ ಉಜ್ಜೈನಿಯ ಮಹಕಲ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಅಲ್ಲಿಂದ ಆತ 2000ನೇ ಇಸವಿ ಡಿಸೆಂಬರ್ 11ರಂದು ತಪ್ಪಿಸಿಕೊಂಡಿದ್ದ.

ಜುಲೈ 26, 2008ರಂದು ಅಹಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿಂದೆ ಐಎಂ ಮತ್ತು ಸಿಮಿ ಉಗ್ರಗಾಮಿ ಸಂಘಟನೆಗಳ ಪಿತೂರಿಯಿದೆ. 2002ರ ಗೋಧ್ರಾ ಹತ್ಯಾಕಾಂಡದ ನಂತರ ಮುಸಲ್ಮಾನರನ್ನು ಕೊಂದದ್ದಕ್ಕೆ ಪ್ರತಿಯಾಗಿ ದ್ವೇಷ ತೀರಿಸಲು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com