ಕಾನ್ಪುರ ರೈಲು ದುರಂತ ಬಗ್ಗೆ ಸುಳ್ಳು ಹೇಳಿಕೆ: ಮೋದಿ ಕ್ಷಮೆ ಯಾಚನೆಗೆ ಕಾಂಗ್ರೆಸ್ ಆಗ್ರಹ

ಕಾನ್ಪುರ ರೈಲು ದುರಂತವನ್ನು ಭಾರತದ ವಿರುದ್ಧ ಷಡ್ಯಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೆ ರೈಲ್ವೆ ಇಲಾಖೆ ಡಿಜಿ ಪ್ರಧಾನಿ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಕಾನ್ಪುರ ರೈಲು ದುರಂತವನ್ನು ಭಾರತದ ವಿರುದ್ಧ ಷಡ್ಯಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೆ ರೈಲ್ವೆ ಇಲಾಖೆ ಡಿಜಿ ಪ್ರಧಾನಿ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಕಾನ್ಪುರ ರೈಲು ದುರಂತಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ ನೀಡಿರುವ ಪ್ರಧಾನಿ ಕ್ಷಮೆ ಯಾಚಿಸಬೇಕೆಂದು ಈಗ ಕಾಂಗ್ರೆಸ್ ಪಟ್ಟು ಹಿಡಿದಿದೆ. 
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ಮನ್ ಪ್ರೀತ್ ಸಿಂಗ್ ಬಾದಲ್, ರೈಲ್ವೆ ಸಚಿವ ಸುರೇಶ್ ಪ್ರಭು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆ ಡಿಜಿ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆದಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಕಾನ್ಪುರ ರೈಲು ದುರಂತವನ್ನು ಭಾರತದ ವಿರುದ್ಧ ನಡೆದಿರುವ ವಿಧ್ವಂಸಕ ಕೃತ್ಯದ ಸಂಚು ಎಂದಿದ್ದರು. ಇದೇ ಹೇಳಿಕೆಯನ್ನು ಚುನಾವಣೆಯ ಪ್ರಚಾರದಲ್ಲೂ ಹೇಳಿದ್ದಾರೆ. ಸುಳ್ಳು ಹೇಳಿಕೆ ನೀಡಿರುವ ಪ್ರಧಾನಿ ಮೋದಿ ಕ್ಷಮೆ ಯಾಚಿಸಬೇಕೆಂದು ಬಾದಲ್ ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com