ಹಾರ್ವರ್ಡ್ ಗಿಂತ ಹಾರ್ಡ್ ವರ್ಕ್ ಹೆಚ್ಚು ಪ್ರಭಾವಶಾಲಿ: ಅಮರ್ಥ್ಯ ಸೇನ್ ಗೆ ಮೋದಿ ಟಾಂಗ್

ಹಾರ್ವರ್ಡ್ ಗಿಂತ ಹಾರ್ಡ್ ವರ್ಕ್ ಹೆಚ್ಚು ಪ್ರಭಾವಶಾಲಿ ಎಂಬುದು ಇತ್ತೀಚಿನ ಜಿಡಿಪಿ ಅಂಕ ಅಂಶಗಳಿಂದ ಸ್ಪಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ....
ನರೇಂದ್ರ ಮೋದಿ
ನರೇಂದ್ರ ಮೋದಿ
ಮಹಾರಾಜ್ ಗಂಜ್: ಹಾರ್ವರ್ಡ್ ಗಿಂತ ಹಾರ್ಡ್ ವರ್ಕ್ ಹೆಚ್ಚು ಪ್ರಭಾವಶಾಲಿ ಎಂಬುದು ಇತ್ತೀಚಿನ ಜಿಡಿಪಿ ಅಂಕ ಅಂಶಗಳಿಂದ ಸ್ಪಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಅವರು ಬುಧವಾರ ಟಾಂಗ್ ನೀಡಿದ್ದಾರೆ.
ಇಂದು ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಂದು ಕಡೆ ನೋಟ್ ನೋಟ್ ನಿಷೇಧ ವಿರೋಧಿಸುವವರು ಹಾರ್ವರ್ಡ್ ಜನ ಹೇಳಿದ್ದನ್ನು ಕೇಳುತ್ತಿದ್ದಾರೆ. ಮತ್ತೊಂದು ಕಡೆ ಬಡವರ ಮಕ್ಕಳು ದೇಶದ ಆರ್ಥಿಕತೆಯನ್ನು ಸುಧಾರಿಸಲು ಹಾರ್ಡ್ ವರ್ಕ್ ಮಾಡುತ್ತಿದ್ದಾರೆ. ಆದರೆ ಹಾರ್ವರ್ಡ್ ಗಿಂತ ಹಾರ್ಡ್ ವರ್ಕ್ ಹೆಚ್ಚು ಪ್ರಭಾವಶಾಲಿ ಎಂಬುದು ಈಗ ಸಾಬೀತಾಗಿದೆ ಎಂದರು.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರೊಪೆಸರ್ ಆಗಿರುವ ಅಮರ್ಥ್ಯ ಸೇನ್ ಅವರು 500 ಹಾಗೂ 1000 ರುಪಾಯಿ ನೋಟ್ ನಿಷೇದದಿಂದಾಗಿ ಆರ್ಥಿಕತೆಯ ಮೂಲದ ಮೇಲೆ ಹೊಡೆತ ಬಿದ್ದಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇರವಾಗಿ ಅರ್ಥಶಾಸ್ತ್ರಜ್ಞನ ಹೆಸರು ಪ್ರಸ್ತಾಪಿಸದೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೋಟು ಅಮಾನ್ಯತೆಯ ನಡುವೆಯೂ ಕಳೆದ ವರ್ಷ ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ದೇಶದ ಜಿಡಿಪಿ ಶೇ.7.1ರಷ್ಟು ಬೆಳವಣಿಗೆ ದಾಖಲಿಸಿದ್ದು, ದೇಶದ ಅರ್ಥ ವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ ಎಂಬ ಹೆಗ್ಗಳಿಕೆಯನ್ನು ಹಾಗೆಯೇ ಉಳಿಸಿಕೊಂಡಿದೆ ಎಂದು ನಿನ್ನೆ ಕೇಂದ್ರ ಸರ್ಕಾರ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com