ನೋಟು ನಿಷೇಧದ ಎಫೆಕ್ಟ್: ಜನ್ ಧನ್ ಖಾತೆಗಳ ಠೇವಣಿ ಶೇ.50 ಕ್ಕಿಂತ ಹೆಚ್ಚು ಏರಿಕೆ!

ನೋಟು ಅಮಾನ್ಯದ ಪರಿಣಾಮವಾಗಿ ನ.8 ರಿಂದ ಈ ವರೆಗೂ ಜನ್ ಧನ್ ಖಾತೆಗಳ ಠೇವಣಿ ಶೇ.50 ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನೋಟು ನಿಷೇಧದ ಎಫೆಕ್ಟ್: ಜನ್ ಧನ್ ಖಾತೆಗಳ ಠೇವಣಿ ಶೇ.50 ಕ್ಕಿಂತ ಹೆಚ್ಚು ಏರಿಕೆ!
ನೋಟು ನಿಷೇಧದ ಎಫೆಕ್ಟ್: ಜನ್ ಧನ್ ಖಾತೆಗಳ ಠೇವಣಿ ಶೇ.50 ಕ್ಕಿಂತ ಹೆಚ್ಚು ಏರಿಕೆ!
ನವದೆಹಲಿ: ನೋಟು ಅಮಾನ್ಯದ ಪರಿಣಾಮವಾಗಿ ನ.8 ರಿಂದ ಈ ವರೆಗೂ ಜನ್ ಧನ್ ಖಾತೆಗಳ ಠೇವಣಿ ಶೇ.50 ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 
ಡಿ.21 ರ ವರೆಗಿನ ಅಂಕಿ-ಅಂಶಗಳ ಪ್ರಕಾರ ಜನ್ ಧನ್ ಖಾತೆಯ ಮೂಲಕ ಒಟ್ಟು 71,557.90 ಕೋಟಿ ರೂಪಾಯಿಯಷ್ಟು ಠೇವಣಿ ಹಣ ಚಲಾವಣೆಯಾಗಿದ್ದು ಈ ವರೆಗೂ 26 ಕೋಟಿಯಷ್ಟು ಖಾತೆಗಳು ಜನ್ ಧನ್ ಯೋಜನೆಯಡಿ ತೆರೆಯಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಪ್ರಕಟಣೆಯೊಂದು ತಿಳಿಸಿದೆ. 
ನೋಟು ಅಮಾನ್ಯದ ನಿರ್ಧಾರವನ್ನು ಪ್ರಕಟಿಸಿದ ಮರು ದಿನ ಅಂದರೆ ನ.9 ರಂದೇ ಜನ್ ಧನ್ ಖಾತೆಗಳಿಗೆ ಸುಮಾರು 45,637 ಕೋಟಿ ರೂಪಾಯಿಯಷ್ಟು ಹಣ ಹರಿದುಬಂದಿತ್ತು. ಕೇಂದ್ರ ಸರ್ಕಾರದ ಘೋಷಣೆ ಹೊರಬಿದ್ದ 8 ನೇ ದಿನ ಜನ್ ಧನ್ ಖಾತೆಗಳಲ್ಲಿನ ಠೇವಣಿಯ ಒಟ್ಟು ಮೊತ್ತ 64,252.15 ಕೋಟಿಯಷ್ಟಾಗಿತ್ತು ಎಂದು ಸಂಸತ್ ಅಧಿವೇಶನದಲ್ಲಿ ಸದನಕ್ಕೆ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. 
ನೋಟು ಅಮಾನ್ಯದ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ಜನ್ ಧನ್ ಖಾತೆಗಳಲ್ಲಿನ ಠೇವಣಿ ಪ್ರಮಾಣ ದಿಢೀರ್ ಏರಿಕೆಯಾಗುತ್ತಿದ್ದ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಜನ್ ಧನ್ ಖಾತೆಗಳನ್ನು ಕಪ್ಪುಹಣ ಹೊಂದಿರುವವರು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ಖಾತೆದಾರರಿಗೆ ಎಚ್ಚರಿಕೆ ನೀಡಿತ್ತು. ಕೇಂದ್ರ ಸರ್ಕಾರದ ಎಚ್ಚರಿಕೆ ನಂತರ ಜನ್ ಧನ್ ಖಾತೆಗಳಲ್ಲಿ ಜಮಾ ಆಗುತ್ತಿದ್ದ ಹಣದ ಮೊತ್ತ ಕ್ರಮೇಣ ಕುಗ್ಗಿದ್ದು, ನ-8-15 ರ ವರೆಗೆ  20,206 ಕೋಟಿ ರೂ, ನವೆಂಬರ್ 16-22 ರ ವರೆಗೆ  11,347 ಸಾವಿರ ಕೋಟಿ ರೂ, ನ 23-30  ವರೆಗೆ 410 ಕೋಟಿ ರೂ ಹಾಗೂ ಡಿ.1-ಡಿ.2ರ ವರೆಗೆ 389 ಕೋಟಿ ರೂ ನಷ್ಟು ಹಣ ಜಮಾ ಆಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಪ್ಪುಹಣವನ್ನು ಸಕ್ರಮ ಮಾಡಿಕೊಳ್ಳಲು ಜನ್ ಧನ್ ಖಾತೆಗಳನ್ನು ದುರ್ಬಳಕೆ ಮಾಡಿಕೊಂಡ ಘಟನೆಗಳು ವರದಿಯಾಗುತ್ತಿದ್ದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಲವು ಬ್ಯಾಂಕ್ ಗಳನ್ನು ಗುರುತಿಸಿದ್ದು, ತನಿಖೆ ನಡೆಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com