ನೋಟು ಅಮಾನ್ಯದ ನಿರ್ಧಾರ ಘೋಷಣೆಯಾದ ಬಳಿಕ ಈ ವರೆಗೂ 100 ಜನರು ಸಾವನ್ನಪ್ಪಿದ್ದು, ತಡೆಗಟ್ಟಲಾರದ ಕಾಡ್ಗಿಚ್ಚಾಗಿ ಪರಿಣಮಿಸಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ನೋಟು ಅಮಾನ್ಯದ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು ಎಲ್ಲಾ ಕಪ್ಪುಹಣವೂ ಸಕ್ರಮವಾಗಿದೆ, ಇಷ್ಟೆಲ್ಲಾ ಆದರೂ ಕೇಂದ್ರ ಸರ್ಕಾರ ನೋಟು ಅಮಾನ್ಯದ ನಿರ್ಧಾರದ ಬಗ್ಗೆ ಸೂಕ್ತ ಅಂಕಿ-ಅಂಶಗಳನ್ನು ನೀಡಿಲ್ಲ ಎಂದು ಚೌಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.