ಆಡಳಿತದಲ್ಲಿ ವಿಜ್ಞಾನದ ಪಾತ್ರ ಮಹತ್ವದ್ದಾಗಿದೆ: ಪ್ರಧಾನಿ ಮೋದಿ

ಜನರಲ್ಲಿ ಹೆಚ್ಚುತ್ತಿರುವ ಉತ್ಸಾಹಗಳನ್ನು ಪೂರೈಸುವಲ್ಲಿ ವಿಜ್ಞಾನದ ಪಾತ್ರ ಮಹತ್ವವಾಗಿದೆ. ನಾಳಿನ ತಜ್ಞರನ್ನು...
ತಿರುಪತಿಯಲ್ಲಿ 104 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ್ನು ಉದ್ಘಾಟಿಸಿ ಮಾತನಾಡಿದಸ ಪ್ರಧಾನ ಮಂತ್ರಿ ನರೇಂದ್ರ ಮೋದಿ
ತಿರುಪತಿಯಲ್ಲಿ 104 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ್ನು ಉದ್ಘಾಟಿಸಿ ಮಾತನಾಡಿದಸ ಪ್ರಧಾನ ಮಂತ್ರಿ ನರೇಂದ್ರ ಮೋದಿ
ತಿರುಪತಿ:ಜನರಲ್ಲಿ ಹೆಚ್ಚುತ್ತಿರುವ ಉತ್ಸಾಹಗಳನ್ನು ಪೂರೈಸುವಲ್ಲಿ ವಿಜ್ಞಾನದ ಪಾತ್ರ ಮಹತ್ವವಾಗಿದೆ. ನಾಳಿನ ತಜ್ಞರನ್ನು ತಯಾರು ಮಾಡಲು ಇಂದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 
ಮೂಲ ಜ್ಞಾನವನ್ನು ಸಂಶೋಧನೆಯನ್ನಾಗಿ ಬದಲಾಯಿಸಿದಾಗ ಸ್ಟಾರ್ಟ್ ಅಪ್ ಮತ್ತು ಕೈಗಾರಿಕೆಗಳು ಆಂತರಿಕ ಮತ್ತು ಸುಸ್ಥಿರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಅವರು ಇಂದು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ  ಆರಂಭಗೊಂಡಿರುವ 5 ದಿನಗಳ 104 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರಗಳ ವಿಷಯವಾಗಿ ತಮ್ಮ  ಭಾಷಣದುದ್ದಕ್ಕೂ ಪ್ರಧಾನಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಅಗತ್ಯಗಳನ್ನು ಪೂರೈಸಲು ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ತಮ್ಮ ಮೂಲ ಸಂಶೋಧನೆಯನ್ನು ಬಲವರ್ಧಿಸಬೇಕು. ಸೇವೆ ಮತ್ತು ತಯಾರಿಕೆ ವಲಯಗಳಲ್ಲಿನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ ಬಳಕೆ ಮಾಡುವಂತಾಗಬೇಕು, ಮೂಲಭೂತ ವಿಜ್ಞಾನದಿಂದ ಅನ್ವಯಿಕ ವಿಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಸೈಬರ್ ಫಿಸಿಕಲ್ ವ್ಯವಸ್ಥೆಯ ಅತ್ಯಂತ ವೇಗದ ಬೆಳವಣಿಗೆ ಬಗ್ಗೆ ಗಮನಹರಿಸುವ ಅಗತ್ಯವಿದೆ. ಇದನ್ನು ಸೇವೆ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ಬಳಕೆ ಮಾಡಬೇಕು ಎಂದ ಪ್ರಧಾನಿ ವಿಜ್ಞಾನದ ಬೆಳವಣಿಗೆಯ ಮಧ್ಯೆ ಸಾಮಾಜಿಕ ಜವಾಬ್ದಾರಿ ಕೂಡ ಇದೆ ಎಂದು ಹೇಳಲು ಮರೆಯಲಿಲ್ಲ.
 ಏನಿದು ಸೈಬರ್ ಫಿಸಿಕಲ್ ವ್ಯವಸ್ಥೆ?: ಹೀಗಂದರೆ, ಗಣನೆ, ನೆಟ್ವರ್ಕಿಂಗ್, ಮತ್ತು ಭೌತಿಕ ಪ್ರಕ್ರಿಯೆಗಳ ಸಂಯೋಜನೆ. ಕೆಲವು ವ್ಯವಸ್ಥೆಗಳ ಆರ್ಥಿಕ ಮತ್ತು ಸಾಮಾಜಿಕ ಸಾಮರ್ಥ್ಯ ಅರಿತುಕೊಂಡು ಅಪಾರವಾಗಿ ಹೆಚ್ಚಿನ ಮತ್ತು ಪ್ರಮುಖ ಹೂಡಿಕೆಗಳನ್ನು ತಂತ್ರಜ್ಞಾನದಲ್ಲಿ ವಿಶ್ವಾದ್ಯಂತ ಮಾಡುವುದಾಗಿದೆ.
ತಂತ್ರಜ್ಞಾನ ವ್ಯವಸ್ಥೆಗಳು ಶಿಸ್ತು ಮೇಲೆ ನಿರ್ಮಿತವಾಗಿದ್ದು,ಸಮಗ್ರ ಅಮೂರ್ತತೆಯನ್ನು ವಿನ್ಯಾಸ, ಮತ್ತು ವಿಶ್ಲೇಷಣೆಯ ಕೌಶಲಗಳನ್ನು ಒದಗಿಸುವ, ಸಾಫ್ಟ್ ವೇರ್ ಮತ್ತು ನೆಟ್ವರ್ಕಿಂಗ್ ಭೌತಿಕ ಪ್ರಕ್ರಿಯೆಗಳ ಡೈನಾಮಿಕ್ಸ್ ಸಂಯೋಜನೆಗಳನ್ನು ಹೊಂದಿರುತ್ತದೆ.
ಪ್ರಧಾನಿಗಳು ನಂತರ ತಿರುಪತಿ ವೆಂಕಟೇಶ್ವರ ಸನ್ನಿಧಾನಕ್ಕೆ ತೆರಳಿ ಸ್ವಾಮಿಗೆ ಪೂಜೆ ನೆರವೇರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com