ದೇಶಾದ್ಯಂತ 500 ನಗರಗಳಲ್ಲಿ ಸ್ವಚ್ಛ ಭಾರತ್ ಸಮೀಕ್ಷೆ ಇಂದು ಆರಂಭ

ಶುಚಿತ್ವಕ್ಕೆ ಆದ್ಯತೆ ನೀಡಲು, ಜನರಲ್ಲಿ ಪರಿಸರ ನೈರ್ಮಲ್ಯ ಕಾಪಾಡುವ ಬಗ್ಗೆ ಸ್ಪರ್ಧಾ ಮನೋಭಾವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಶುಚಿತ್ವಕ್ಕೆ ಆದ್ಯತೆ ನೀಡಲು, ಜನರಲ್ಲಿ ಪರಿಸರ ನೈರ್ಮಲ್ಯ ಕಾಪಾಡುವ ಬಗ್ಗೆ ಸ್ಪರ್ಧಾ ಮನೋಭಾವ ಮೂಡಿಸಲು ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯನ್ನು ಇಂದು ಆರಂಭಿಸಲಿದ್ದು ದೇಶಾದ್ಯಂತ 500 ನಗರಗಳಲ್ಲಿ ಇದು ನಡೆಯಲಿದೆ.ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಈ ಸಮೀಕ್ಷೆಯನ್ನು ನಡೆಸುತ್ತದೆ. 
ನಗರ ಪಾಲಿಕೆಗಳು ನೀಡುವ ಅಂಕಿಅಂಶಗಳನ್ನು ಆಧರಿಸಿ ಮಂಡಳಿ ನಗರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಮಂಡಳಿಯ ಸದಸ್ಯರು ನಗರಗಳನ್ನು ವೀಕ್ಷಿಸುವ ಮೂಲಕ, ಸ್ವತಂತ್ರ ಲೆಕ್ಕಾಚಾರ ಮತ್ತು ನಾಗರಿಕರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
ನಗರದಲ್ಲಿನ ತ್ಯಾಜ್ಯ ಸಂಗ್ರಹ, ಸಾಗಾಣಿಕೆ, ಕಸ ಗುಡಿಸುವಿಕೆ, ಬಯಲು ಶೌಚ ಮುಕ್ತ, ನಗರಪಾಲಿಕೆ ಘನ ತ್ಯಾಜ್ಯ ಪರಿಷ್ಕರಣೆ ಮತ್ತು ವಿಲೇವಾರಿ, ಮಾಹಿತಿ, ಶಿಕ್ಷಣ ಮತ್ತು ವರ್ತನೆ ಬದಲಾವಣೆ ಮತ್ತು ಸಾಮರ್ಥ್ಯ ಬೆಳೆಸುವಿಕೆ ಮೊದಲಾದ ವಿಷಯಗಳಲ್ಲಿ ನಗರವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಸ್ವಚ್ಛ ಭಾರತ್ ಮಿಷನ್ ಇ-ಲರ್ನಿಂಗ್ ಪೋರ್ಟಲ್ ನ್ನು ಇದು ಹೊಂದಿದೆ.
ನಗರದ ನಾಗರಿಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು 1969 ಸಂಖ್ಯೆಗೆ ಮಿಸ್ ಕಾಲ್ ಕೊಟ್ಟು ಅಲ್ಲಿ ಅಭಿಪ್ರಾಯಗಳನ್ನು ರೆಕಾರ್ಡ್ ಮಾಡಬಹುದು. ಅಥವಾ ಸ್ವಚ್ಛ ಸರ್ವೇಕ್ಷಣ ವೆಬ್ ಸೈಟ್ ನಲ್ಲಿ ಸಿಗುವ ಅರ್ಜಿಯಲ್ಲಿ ಅಭಿಪ್ರಾಯಗಳನ್ನು ತುಂಬಬಹುದು.
ಸ್ವಚ್ಛ ಸರ್ವೇಕ್ಷಣ 201 6, ದೇಶದ 73 ನಗರಗಳಿಗೆ ರ್ಯಾಂಕ್ ನೀಡಿತ್ತು. ಸುಮಾರು 1 ಲಕ್ಷ ನಾಗರಿಕರು ಭಾಗಿಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com