ಎಲ್ ಕೆ ಆಡ್ವಾಣಿ ಪ್ರಧಾನಿ ಹುದ್ದೆ ಕಸಿದುಕೊಳ್ಳಬಹುದೆಂದು ವಾಜಪೇಯಿ ಭಯಗೊಂಡಿದ್ದರು: ಜೀವನಚರಿತ್ರೆ

ತಮ್ಮ ವಿರುದ್ಧ ಎಲ್ ಕೆ ಆಡ್ವಾಣಿ ತಂಡ ದಂಗೆ ಏಳುತ್ತದೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಯಗೊಂಡಿದ್ದರು ಎಂದು ಹೊಸದಾಗಿ ಬರೆದಿರುವ ...
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ

ನವದೆಹಲಿ: ತಮ್ಮ ವಿರುದ್ಧ ಎಲ್ ಕೆ ಆಡ್ವಾಣಿ ತಂಡ ದಂಗೆ ಏಳುತ್ತದೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಯಗೊಂಡಿದ್ದರು ಎಂದು ಹೊಸದಾಗಿ ಬರೆದಿರುವ ಜೀವನಚರಿತ್ರೆಯೊಂದರಲ್ಲಿ ಉಲ್ಲೇಖವಾಗಿದೆ.

2002 ರ ಜೂನ್ ನಲ್ಲಿ ಎಲ್ ಕೆ ಆಡ್ವಾಣಿ ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ತಮ್ಮ ಪ್ರಧಾನಿ ಹುದ್ದೆ ಪಡೆದುಕೊಳ್ಳಲು ಯತ್ನಿಸುತ್ತಾರೆಂದು ವಾಜಪೇಯು ಭೀತರಾಗಿದ್ದರು ಎಂದು ಪತ್ರಕರ್ತ ಉಲ್ಲೇಖ್ ಎನ್ ಪಿ ಅವರು  ಬರೆದಿರುವ ದಿ ಅನ್ ಟೋಲ್ಡ್ ವಾಜಪೇಯಿ: ಪೊಲಿಟಿಶಿಯನ್ ಅಂಡ್ ಪ್ಯಾರಾಡಾಕ್ಸ್ ಪುಸ್ತಕದಲ್ಲಿ ಬರೆದಿದ್ದಾರೆ.

ಈ ಸಂದರ್ಭದಲ್ಲಿ ವಾಜಪೇಯಿ ಮನೆಗೆ ಬಂದಿದ್ದ ಕೇಂದ್ರ ಸಚಿವರೊಬ್ಬರು ಆ ಬಗ್ಗೆ ತುಂಬಾ ಯೋಚನೆ ಮಾಡಬಾರದಾಗಿ ಸಲಹೆ ನೀಡಿದ್ದರು ಎಂದು ಲೇಖಕ ತಿಳಿಸಿದ್ದಾರೆ.

ಆದರೆ ಇದಕ್ಕೆ ಉತ್ತರಿಸಿದ್ದ ಅಂದಿನ ಪ್ರಧಾನಿಯಾಗಿದ್ದ ವಾಜಪೇಯಿ, ತಮ್ಮನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಿ, ಎಲ್ ಕೆ ಆಡ್ವಾಣಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ವಾಜಪೇಯಿ ಅವರಿಗೆ ತಿಳಿದಿರಲಿಲ್ಲ, ವಾಜಪೇಯಿ ಅವರು ಪ್ರಧಾನಿ ಹುದ್ದೆ ಬಿಟ್ಟುಕೊಟ್ಟು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವಂತೆ ಆರ್ ಎಸ್ ಎಸ್ ಹೇಳಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

1996 ರಲ್ಲಿ  ವಾಜಪೇಯಿ 10ನೇ ಪ್ರಧಾನಿಯಾಗಿ 13 ದಿನ ಕಾರ್ಯ ನಿರ್ವಹಿಸಿದ್ದರು. ಅದಾದ ನಂತರ 19198ರಿಂದ 2004 ರ ವರೆದೆ ಪ್ರಧಾನಮಂತ್ರಿಯಾಗಿದ್ದರು. ಈ ವೇಳೆ ನಡೆದ ವಾಜಪೇಯಿ ಅವರ ಜೀವನದ ಹಲವು ಆಗು-ಹೋಗುಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com