ಕಿರಣ್ ಬೇಡಿ
ಕಿರಣ್ ಬೇಡಿ

ಎರಡು ವರ್ಷಗಳ ನಂತರವೇ ನಾನು ಅಧಿಕಾರದಿಂದ ಕೆಳಗಿಳಿಯುವುದು: ಕಿರಣ್ ಬೇಡಿ

ಪುದುಚೆರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಲೆಪ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವಿನ ಸಂಘರ್ಷ ತಾರಕಕ್ಕೇರಿದೆ. 2018ರ ಮೇ 29 ವರೆಗೆ ತಾವು ...

ಪುದುಚೆರಿ: ಪುದುಚೆರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಲೆಪ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವಿನ ಸಂಘರ್ಷ ತಾರಕಕ್ಕೇರಿದೆ. 2018ರ ಮೇ 29 ವರೆಗೆ ತಾವು ಅಧಿಕಾರದಲ್ಲಿರುವುದಾಗಿ ಕಿರಣ್ ಬೇಡಿ ಹೇಳಿದ್ದಾರೆ.

ನನಗೆ ನಾನು ಗಡುವು ವಿಧಿಸಿಕೊಂಡಿದ್ದೇನೆ  ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯ ಉಪ ರಾಜ್ಯಪಾಲೆಯಾಗಿ ಅಧಿಕಾರ ವಹಿಸಿಕೊಂಡು ಮೇ 29, 2018ಕ್ಕೆ 2 ವರ್ಷ ಆಗಲಿದ್ದು, ಅಂದು ರಾಜೀನಾಮೆ ಕೊಡಲಿದ್ದೇನೆ. ಈ ವಿಷಯವನ್ನು ಹಿರಿಯರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಮುಖ್ಯಮಂತ್ರಿ ನಾರಾಯಣಸ್ವಾಮಿ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ನಿರ್ಬಂಧ ಹೇರಿದ್ದರು. ಕಿರಣ್‌ ಬೇಡಿ ಈ ನಿರ್ಬಂಧವನ್ನು ತೆರವುಗೊಳಿಸಿದ್ದರು.

ಇದರಿಂದ ಸರ್ಕಾ ಮತ್ತು ಬೇಡಿ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕರು ಬೇಡಿ ಕಾರ್ಯವೈಖರಿ ವಿರುದ್ಧ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ರಿಗೆ ದೂರು ನೀಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com