ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮೇಜಾನ್ ನ ವಕ್ತಾರ, ಇನ್ನು ಮುಂದೆ ತ್ರಿವರ್ಣ ಧ್ವಜ ಮಾದರಿಯಲ್ಲಿ ತಯಾರಾಗಿರುವ ಡೋರ್ ಮ್ಯಾಟ್ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿಲ್ಲ ಎಂದು ಹೇಳಿದ್ದಾರೆ. ತ್ರಿವರ್ಣ ಧ್ವಜದ ಮಾದರಿಯಲ್ಲಿ ಡೋರ್ ಮ್ಯಾಟ್ ನ್ನು ತಯಾರಿಸಿದ ಉತ್ಪನ್ನವನ್ನು ಅಮೇಜಾನ್ ಸಂಸ್ಥೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ಉತ್ಪನ್ನದ ಮಾರಾಟವನ್ನು ತಕ್ಷಣವೇ ನಿಲ್ಲಿಸದಿದ್ದರೆ ಅಮೇಜಾನ್ ನ ಯಾವುದೇ ನೌಕರರಿಗೆ ವೀಸಾ ನಿರಾಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಈಗ ಮಾಡಿರುವ ತಪ್ಪಿಗೆ ಅಮೇಜಾನ್ ಕ್ಷಮೆ ಯಾಚಿಸಬೇಕೆಂದೂ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು.