ಖರ್ಗೋನೆ: ಇತ್ತೀಚಿಗೆ ಮಧ್ಯಪ್ರದೇಶದ ರೈತರೊಬ್ಬರಿಗೆ ಮಹಾತ್ಮ ಗಾಂಧಿ ಭಾವಚಿತ್ರವಿಲ್ಲದ ಹೊಸ 2000 ರುಪಾಯಿ ನೋಟ್ ಬಂದಿತ್ತು. ಈಗ ಮಧ್ಯಪ್ರದೇಶದ ಖರ್ಗೋನೆ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನ ಎಟಿಎಂನಿಂದ ಹಣ ಡ್ರಾ ಮಾಡಿದ ವ್ಯಕ್ತಿ ಕೈಗೆ ಒಂದು ಸೈಡ್ ಖಾಲಿ ಇರುವ 500 ರುಪಾಯಿ ನೋಟ್ ಬಂದಿದೆ.
ಹೇಮಂತ್ ಸೋನಿ ಎಂಬುವವರು ಮಂಗಳವಾರ ರಾತ್ರಿ ಸೇಗಾ ಗ್ರಾಮದ ಎಟಿಎಂನಲ್ಲಿ 1,500 ರುಪಾಯಿ ಡ್ರಾ ಮಾಡಿದ್ದು, 500 ರುಪಾಯಿಯ ಮೂರು ನೋಟ್ ಗಳ ಬಂದಿವೆ. ಆದರೆ ಆ ಪೈಕಿ ಎರಡು ನೋಟ್ ಗಳು ಒಂದು ಸೈಡ್ ಸಂಪೂರ್ಣ ಖಾಲಿ ಇರುವುದು ನೋಡಿ ಶಾಕ್ ಆಗಿದ್ದಾರೆ.
ಈ ಸಂಬಂಧ ಸಂಬಂಧಪಟ್ಟ ಬ್ಯಾಂಕ್ ಗೆ ದೂರು ನೀಡಿದ ನಂತರ, ಬ್ಯಾಂಕ್ ಅಧಿಕಾರಿಗಳು ಆ ಎರಡು ನೋಟ್ ಗಳನ್ನು ಬದಲಾವಣೆ ಮಾಡಿ ಕೊಟ್ಟಿದ್ದಾರೆ ಎಂದು ಸೋನಿ ತಿಳಿಸಿದ್ದಾರೆ.
ಗ್ರಾಹಕರು ದೂರು ನೀಡಿದ ನಂತರ ನಾವು ಈ ರೀತಿ ಮುದ್ರಣದೋಷವಿರುವ ನೋಟ್ ಗಳ ವಿನಿಮಯ ಮಾಡಿರುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಇನ್ನುಮುಂದೆ ಎಟಿಎಂಗೆ ಲೋಡ್ ಮಾಡುವ ಮುನ್ನ ನೋಟ್ ಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.