ಜೂಲಿಯಸ್ ಕಿತ್'ಬಾಕ್ ದೋರ್ಫಾಂಗ್
ದೇಶ
ಅತ್ಯಾಚಾರ ಆರೋಪಿ ಮೇಘಾಲಯ ಶಾಸಕನಿಗೆ 14 ದಿನ ನ್ಯಾಯಾಂಗ ಬಂಧನ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮೇಘಾಲಯದ ಪಕ್ಷೇತರ ಶಾಸಕ ಜೂಲಿಯಸ್ ಕಿತ್'ಬಾಕ್...
ಗುವಾಹಟಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮೇಘಾಲಯದ ಪಕ್ಷೇತರ ಶಾಸಕ ಜೂಲಿಯಸ್ ಕಿತ್'ಬಾಕ್ ದೋರ್ಫಾಂಗ್ ಅವರನ್ನು ಕೋರ್ಟ್ ಗುರುವಾರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಐದು ದಿನಗಳ ಪೊಲೀಸ್ ಬಂಧನ ಅವರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಇಂದು ಶಿಲಾಂಗ್ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಶಾಸಕನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
14 ವರ್ಷದ ಬಾಲಕಿಯೊಬ್ಬಳ ಮೇಲೆ ಶಾಸಕ ಜೂಲಿಯಸ್ ಅವರು ಅತ್ಯಾಚಾರ ಮಾಡಿದ್ದಾರೆಂದು ಬಾಲಕಿಯ ಕುಟುಂದವರು ಡಿ.16 ರಂದು ದೂರು ನೀಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜೂಲಿಯಸ್ ಕಿತ್'ಬಾಕ್ ದೋರ್ಫಾಂಗ್ ಅವರು ನಾಪತ್ತೆಯಾಗಿದ್ದರು.
ನಂತರ ದೋರ್ಫಾಂಗ್ ಅವರ ಬಂಧನಕ್ಕೆ ಮೇಘಾಲಯ ಪೊಲೀಸರು ಲುಕ್'ಔಟ್ ನೊಟೀಸ್ ಜಾರಿ ಮಾಡಿದ್ದರು. ಶಾಸಕ ಗುವಾಹಟಿಯಲ್ಲಿ ತಲೆಮರೆಸಿಕೊಂಡಿರುವುದಾಗಿ ಮಾಹಿತಿ ತಿಳಿಯುತ್ತಿದ್ದಂತೆ ಮೇಘಾಲಯ ಪೊಲೀಸರು ಅಸ್ಸಾಂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಅಸ್ಸಾಂ ಹಾಗೂ ಮೇಘಾಲಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಶಾಸಕ ದೋರ್ಫಾಂಗ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ