ಖಾದಿ ಕ್ಯಾಲೆಂಡರ್ ನಲ್ಲಿ ಮೋದಿ ಚಿತ್ರ: ಗಾಂಧೀಜಿ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದ ಕೇಂದ್ರ

ಕೇಂದ್ರ ಸಣ್ಣ ಉದ್ಯಮಗಳ ಸಚಿವ ಕಲ್ ರಾಜ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದು ಮಹಾತ್ಮಾ ಗಾಂಧಿಯನ್ನು ಪಲ್ಲಟಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಖಾದಿ ಕ್ಯಾಲೆಂಡರ್ ನಲ್ಲಿ ಮೋದಿ ಚಿತ್ರ: ಗಾಂಧೀಜಿ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದ ಕೇಂದ್ರ
ನವದೆಹಲಿ: ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ಪ್ರಕಟಿಸಿರುವ 2017ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಚರಕ ನೂಲುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿತ್ರ ಕಾಣೆಯಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ  ಸಣ್ಣ ಉದ್ಯಮಗಳ ಸಚಿವ ಕಲ್ ರಾಜ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದು ಮಹಾತ್ಮಾ ಗಾಂಧಿಯನ್ನು ಪಲ್ಲಟಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. 
ಕ್ಯಾಲೆಂಡರ್ ನಲ್ಲಿ ಗಾಂಧಿ ಚಿತ್ರದ ಬದಲಿಗೆ ನರೇಂದ್ರ ಮೋದಿ ಚಿತ್ರ ಪ್ರಕಟವಾಗಿರುವ ಬಗ್ಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಲ್ ರಾಜ್ ಮಿಶ್ರಾ, ತಾವು ಇನ್ನಷ್ಟೇ ಕ್ಯಾಲೆಂಡರ್ ನ್ನು ನೋಡಬೇಕಿದ್ದು, ತಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕೇವಲ ಒಂದು ಪುಟದಲ್ಲಿ ಮಾತ್ರ ಮೋದಿ ಅವರ ಈ ಚಿತ್ರ ಇದೆ ಎಂದು ಪ್ರಧಾನಿಯವರನ್ನು  ಸಮರ್ಥಿಸಿಕೊಂಡಿದ್ದಾರೆ. 
ಮಹಾತ್ಮಾ ಗಾಂಧಿಯವರಿಗೆ ಅವರದ್ದೇ ಆದ ಒಂದು ಸ್ಥಾನವಿದೆ ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಲ್ ರಾಜ್ ಮಿಶ್ರಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com