ಜೆಎನ್ ಯು
ದೇಶ
ರಾಷ್ಟ್ರೀಯತೆ ಕುರಿತು ಜೆಎನ್ ಯು ಪ್ರಾಧ್ಯಾಪಕರ ಉಪನ್ಯಾಸ ಮಾಲಿಕೆಗೆ ಪುಸ್ತಕ ರೂಪ
ಜೆಎನ್ ಯು ವಿವಿಯಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣ ನಡೆದ ನಂತರ ಅಲ್ಲಿನ ಪ್ರಾಧ್ಯಾಪಕರುಗಳು ಹಮ್ಮಿಕೊಂಡಿದ್ದ ರಾಷ್ಟ್ರೀಯತೆ, ಉಪನ್ಯಾಸ ಮಾಲಿಕೆಗೆ ಪುಸ್ತಕ ರೂಪ ನೀಡಲಾಗಿದೆ.
ನವದೆಹಲಿ: ಜೆಎನ್ ಯು ವಿವಿಯಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣ ನಡೆದ ನಂತರ ಅಲ್ಲಿನ ಪ್ರಾಧ್ಯಾಪಕರುಗಳು ಹಮ್ಮಿಕೊಂಡಿದ್ದ ರಾಷ್ಟ್ರೀಯತೆ, ರಾಷ್ಟ್ರ ನಿಜವಾಗಿಯೂ ತಿಳಿದುಕೊಳ್ಳಬೇಕಿರುವುದು ಏನನ್ನು ಎಂಬ ಉಪನ್ಯಾಸ ಮಾಲಿಕೆಗೆ ಪುಸ್ತಕ ರೂಪ ನೀಡಲಾಗಿದೆ.
ನಿರಂತರ ಒಂದು ತಿಂಗಳು ನಡೆದ ಉಪನ್ಯಾಸ ಸರಣಿಯಲ್ಲಿ 24 ಉಪನ್ಯಾಸಗಳಿದ್ದು, ಖ್ಯಾತ ಶಿಕ್ಷಣ ತಜ್ಞರಾದ ರೋಮಿಲಾ ಥಾಪರ್, ಹರ್ಬನ್ಸ್ ಮುಖಿಯಾ, ಜಯತಿ ಘೋಷ್ ಸೇರಿದಂತೆ ಹಲವಾರು ಉಪನ್ಯಾಸ ನೀಡಿದ್ದಾರೆ. ಈ ಉಪನ್ಯಾಸ ಮಾಲಿಕೆಯನ್ನು ಪುಸ್ತಕದಲ್ಲಿ ಹೊರತರಲಾಗಿದೆ. ಸುಮಾರು 368 ಪುಟಗಳಲ್ಲಿರುವ ಪ್ರಕಟವಾಗಿರುವ ಪುಸ್ತಕ ಜ.25 ರಂದು ಬಿಡುಗಡೆಯಾಗಲಿದೆ. ಇದೇ ದಿನ ಡೆಮಾಕ್ರೆಟಿಸೈಸಿಂಗ್ ಸೋಶಿಯಲ್ ಜಸ್ಟೀಸ್ ಉಪನ್ಯಾಸ ಕೂಡ ಪೂರ್ಣವಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ