ಸಿಯಾಚಿನ್ ನಲ್ಲಿ ವೀರಮರಣ ಹೊಂದಿದ ಲ್ಯಾನ್ಸ್ ಹನುಮಂತಪ್ಪಗೆ ಮರಣೋತ್ತರ ಸೇನಾ ಪದಕ ಗೌರವ

ಸಿಯಾಚಿನ್ ನ ಹಿಮಪಾತದಲ್ಲಿ ದಟ್ಟವಾದ ಹಿಮದಡಿ ದಿನಗಟ್ಟಲೆ ಸಿಲುಕಿ ವೀರ ಮರಣ ಕಂಡ...
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಂದ ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಸೇನಾ ಪದಕ ಪಡೆದ ಸಂದರ್ಭ.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಂದ ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಸೇನಾ ಪದಕ ಪಡೆದ ಸಂದರ್ಭ.
ನವದೆಹಲಿ: ಸಿಯಾಚಿನ್ ನ ಹಿಮಪಾತದಲ್ಲಿ ದಟ್ಟವಾದ ಹಿಮದಡಿ ದಿನಗಟ್ಟಲೆ ಸಿಲುಕಿ ವೀರ ಮರಣ ಕಂಡ ಧಾರವಾಡದ ಲ್ಯಾನ್ಸೆ ನಾಯ್ಕ್ ಹನುಮಂತಪ್ಪ ಕೊಪ್ಪದ್  ಅವರಿಗೆ ಮರಣೋತ್ತರ ಸೇನಾ ಪದಕ ಗೌರವ ನೀಡಲಾಯಿತು.
ಸೇನಾ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಇಂದು ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಪಾರಿತೋಷಕವನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಂದ ಪಡೆದುಕೊಂಡರು.
ಅವರೊಂದಿಗೆ ಕೆಚ್ಚೆದೆಯಿಂದ ಹೋರಾಡಿದ 15 ಮಂದಿಗೆ ಸೇನಾ ಯೋಧರಿಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಯಿತು. ಇವರಲ್ಲಿ 5 ಮಂದಿ ವೀರ ತ್ಯಾಗ ಕಂಡಿದ್ದಾರೆ.
ಇಂದು ಗೌರವ ಪ್ರಶಸ್ತಿಗೆ ಭಾಜನರಾದ ರಕ್ಷಣಾ ಸಿಬ್ಬಂದಿಗಳು: 
1. ಮೇಜರ್ ಕೃಷ್ಣಕಾಂತ್ ಬಾಜ್ಪೈ
2. ಕರ್ನಲ್ ತರುಣ್ ಪಾಠಕ್
3. ಲೆಫ್ಟಿನೆಂಟ್ ಕರ್ನಲ್ ರಾಹುಲ್ ಪ್ರತಾಪ್ ಸಿಂಗ್
4. ಮೇಜರ್ ದೊರ್ಜೀ ಲೆಟಾ
5. ಕ್ಯಾಪ್ಟನ್ ವಿಕಾಸ್ ಪಂಗಲ್
6. ಕ್ಯಾಪ್ಟನ್ ಸುಶಾಂತ್ ಶರ್ಮ
7.  ಲೆಫ್ಟಿನೆಂಟ್ ಸತೀಶ್ ಕುಮಾರ್ ಮಿಶ್ರಾ
8. ರೈಫಲ್ ಮ್ಯಾನ್ ರಾಜು ತಾಪ 
9. ರೈಫಲ್ ಮ್ಯಾನ್ ರಾಹುಲ್ ಸಿಂಗ್
10. ಲೆಫ್ಟಿನೆಂಟ್ ಕರ್ನಲ್ ರಾಜೇಶ್ ಗುಲಾಟಿ(ಮರಣೋತ್ತರ)
11. ನಾಯಬ್ ಸುಬೇದಾರ್ ರಾಮ್ ಸಿಂಗ್(ಮರಣೋತ್ತರ)
12. ಲ್ಯಾನ್ಸೆ ನಾಯಕ್ ಗೋವಿಂದ್ ಸಿಂಗ್ ಮೆಹ್ತಾ(ಮರಣೋತ್ತರ)
13. ಲ್ಯಾನ್ಸೆ ನಾಯಕ್ ಕುಲ್ವಂತ್ ಸಿಂಗ್ (ಮರಣೋತ್ತರ) 
ಅಲ್ಲದೆ 14 ಭಾರತೀಯ ಸೇನೆಯ ಘಟಕಗಳಿಗೆ ಸರ್ವತೋಮುಖ ಪ್ರದರ್ಶನಕ್ಕಾಗಿ ಘಟಕ ಬಹುಮಾನ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com