ಐಐಟಿಗಳಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರೊ. ತಿಮೋತಿ ಗೊನ್ಸಾಲ್ವಿಸ್ ಅಧ್ಯಕ್ಷತೆಯ ಜೆಎಬಿ ಮೀಸಲಾತಿ ಪ್ರಕಟಿಸುವ ಆಯ್ಕೆಯನ್ನು ಪರಿಗಣಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 2018 ರ ಶೈಕ್ಷಣಿಕ ವರ್ಷದಿಂದ ಮೀಸಲಲತಿ ಜಾರಿಗೆ ತರುವುದರ ಬಗ್ಗೆ ಸದ್ಯದಲ್ಲೇ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಮೀಸಲಾತಿ ನೀಡುವುದರಿಂದ ಪುರುಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.