ಹೊಸ ದತ್ತು ನಿಯಂತ್ರಣ ಕಾಯ್ದೆ ಇಂದು ಜಾರಿಗೆ

ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ(ಸಿಎಆರ್ಎ)ರಚಿಸಿರುವ ಇತ್ತೀಚೆಗೆ ಅಧಿಸೂಚನೆ ಹೊರಡಿಸಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ(ಸಿಎಆರ್ಎ)ರಚಿಸಿರುವ ಇತ್ತೀಚೆಗೆ ಅಧಿಸೂಚನೆ ಹೊರಡಿಸಿರುವ ದತ್ತು ನಿಯಂತ್ರಣ02017 ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಬಾಲ ನ್ಯಾಯ(ಮಕ್ಕಳ ರಕ್ಷಣೆ ಮತ್ತು ಜಾಗ್ರತೆ) ಕಾಯ್ದೆ 2015ರ ಸೆಕ್ಷನ್ 68(ಸಿ)ಯಡಿ ದತ್ತು ನಿಯಂತ್ರಣ 2017 ಕಡ್ಡಾಯವಾಗಿದೆ. ಇದನ್ನು ಕೇಂದ್ರ ಸರ್ಕಾರ ಜನವರಿ 4ರಂದು ಅಧಿಸೂಚನೆ ಹೊರಡಿಸಿದ್ದು ಇಂದಿನಿಂದ ಕಾನೂನು ಜಾರಿಗೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ದತ್ತು ನಿಯಂತ್ರಣ 2017 ಕಾಯ್ದೆ, ದತ್ತು ಮಾರ್ಗಸೂಚಿ 2015ರ ಬದಲಿಗೆ ಇದೆ. ಈ ಕಾನೂನು ದೇಶದಲ್ಲಿ ದತ್ತು ಪ್ರಕ್ರಿಯೆ ಸರಳೀಕರಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದತ್ತು ಅಧಿಕಾರಿಗಳು ಮತ್ತು ಸಾಕು ತಂದೆಯರು ಎದುರಿಸುವ ಸವಾಲುಗಳು, ಎದುರಿಸುವ ಕಷ್ಟಗಳನ್ನು ಹೊಸ ನಿಯಂತ್ರಣ ಕಾನೂನು ಬಗೆಹರಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com