ವಾರಣಾಸಿ ಪೋಸ್ಟರ್​ಗಳಲ್ಲಿ ಕೃಷ್ಣಾರ್ಜುನರಾಗಿ ರಾಹುಲ್, ಅಖಿಲೇಶ್ ಪ್ರತ್ಯಕ್ಷ!

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಆಡಳಿತರೂಢ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಒಲವು...
ಅಖಿಲೇಶ್ ಯಾದವ್ - ರಾಹುಲ್ ಗಾಂಧಿ
ಅಖಿಲೇಶ್ ಯಾದವ್ - ರಾಹುಲ್ ಗಾಂಧಿ
ವಾರಣಾಸಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಆಡಳಿತರೂಢ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಒಲವು ತೋರಿರುವ ಬೆನ್ನಲ್ಲೇ ವಾರಣಾಸಿಯ ಹಲವು ಕಡೆ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೃಷ್ಣಾರ್ಜುನರಾಗಿ ರಥದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್​ಗಳ ರಾರಾಜಿಸುತ್ತಿದೆ.
ಪೋಸ್ಟರ್​ಗಳಲ್ಲಿ ಕೃಷ್ಣನಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅರ್ಜುನನಾಗಿ ಎಸ್​ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಬಿಂಬಿಸಲಾಗಿದ್ದು, ಕಾಂಗ್ರೆಸ್ ಮತ್ತು ಎಸ್​ಪಿ ನಡುವಿನ ಮೈತ್ರಿ ಬಹುತೇಕ ಖಚಿತ ಎನ್ನಲಾಗಿದೆ. ಪೋಸ್ಟರ್​ನಲ್ಲಿ ಎಸ್​ಪಿ ಚಿಹ್ನೆ ಸೈಕಲ್ ಬಳಸಲಾಗಿದೆ. ವಿಕಾಸ ಮತ್ತು ವಿಜಯದ ಹಾದಿಯಲ್ಲಿ ಇಬ್ಬರು ಮಹಾರಥಿಗಳು ಮುನ್ನುಗ್ಗುತ್ತಿದ್ದಾರೆ ಎಂಬ ಘೊಷವಾಕ್ಯವನ್ನು ಬಳಸಲಾಗಿದೆ.
ಈಗಾಗಲೇ ಕಾಂಗ್ರೆಸ್ ಮುಖ್ಯಮಂತ್ರಿಯಾಗಬೇಕಿದ್ದ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಂಪೂರ್ಣವಾಗಿ ಅಖಿಲೇಶ್​ಗೆ ಸಹಮತ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ವಿರುದ್ಧ ಸೈಕಲ್ ಚಿಹ್ನೆಗಾಗಿ ಪೈಪೋಟಿ ನಡೆಸಿ ಗೆದ್ದಿದ್ದ ಅಖಿಲೇಶ್ ಕಾಂಗ್ರೆಸ್ ಜತೆಗೆ ಮೈತ್ರಿ ಸಾಧಿಸುವತ್ತ ಹೆಜ್ಜೆ ಇರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com