ಸಮಾಜವಾದಿ ಪಕ್ಷದ 191 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಂದಾ ಅವರು, ನಾವು ಕಾಂಗ್ರೆಸ್ ಗೆ 54 ಸ್ಥಾನಗಳನ್ನು ಮುಂದಿಟ್ಟಿದ್ದು, ಇನ್ನೂ 25ರಿಂದ 30 ಸ್ಥಾನಗಳನ್ನು ಕೊಡಲು ಬಯಸಿದ್ದೆವು. ಆದರೆ ನಮಗೆ ಈವರೆಗೂ ಕಾಂಗ್ರೆಸ್ ಪಕ್ಷದಿಂದ ಯಾವುದೇ ಸ್ಪಂದನೆ ಬಂದಿಲ್ಲ. ಮಾತುಕತೆಯ ಮೇಜಿಗೆ ಈಗ ಕಾಂಗ್ರೆಸ್ ಬರುತ್ತಿಲ್ಲ ಎಂದು ನಂದಾ ಆರೋಪಿಸಿದ್ದಾರೆ.