
ನವದೆಹಲಿ: ಕೇಂದ್ರ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ವಿಜಯ್ ಗೋಯಲ್ ಜನವರಿ 18ರಂದು ಆರ್ಟ್ ಫೆಸ್ಟ್ ನಲ್ಲಿದ್ದ ಹಿಜಾಬ್ ಧರಿಸಿದ ಮಹಿಳೆಯ ಪೇಟಿಂಗ್‍ವೊಂದನ್ನು ಟ್ವೀಟ್ ಮಾಡಿದ್ದರು. ಈ ಫೋಟೊ ಜತೆ ಈ ಪೇಟಿಂಗ್ ಝೈರಾ ವಾಸಿಮ್ ಅವರ ಕಥೆಯೊಂದಿಗೆ ಸಾಮ್ಯತೆ ಹೊಂದಿದೆ. ಪಂಜರ ಮುರಿದು ನಮ್ಮ ಹೆಣ್ಮಕ್ಕಳು ಮುಂದೆ ಸಾಗುತ್ತಿದ್ದಾರೆ, ನಮ್ಮ ಹೆಣ್ಣು ಮಕ್ಕಳು ಗಟ್ಟಿಗಿತ್ತಿಯರು ಎಂದು ಬರೆಯಲಾಗಿತ್ತು.
ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಝೈರಾ, ಸರ್ ಎಲ್ಲ ಗೌರವಗಳೊಂದಿಗೆ ಈ ಮಾತುಗಳನ್ನು ಹೇಳುತ್ತಿದ್ದೇನೆ. ನಾನು ನಿಮ್ಮ ಮಾತನ್ನು ಒಪ್ಪುವುದಿಲ್ಲ. ಹಿಜಾಬ್ ಧರಿಸಿರುವ ಮಹಿಳೆಯರು ಸುಂದರ ಮತ್ತು ಸ್ವತಂತ್ರವಾಗಿದ್ದಾರೆ. ಅಂದಹಾಗೆ, ಈ ಪೇಟಿಂಗ್‍ನಲ್ಲಿ ಚಿತ್ರಿಸಿರುವ ಕಥೆಗೂ ನನ್ನ ಕಥೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾಳೆ
ಝೈರಾ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಗೋಯಲ್ ನನ್ನ ಟ್ವೀಟ್‍ನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದಾರೆ. ಇದೇ ವೇಳೆ ಗೋಯಲ್ ಟ್ವೀಟ್‍ಗೆ ಬಗ್ಗೆ ಹಲವಾರು ಜನ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ್ದಕ್ಕೆ ಜನರಿಂದ ಆಕ್ಷೇಪಕ್ಕೊಳಗಾಗಿ ನಟಿ ಝೈರಾ ಸುದ್ದಿಯಾಗಿದ್ದಳು
Advertisement