ಪಿಒಎಸ್ ಮೂಲಕ ಕಾಯ್ದಿರಿಸಿದ ರೈಲ್ವೆ ಟಿಕೆಟ್ ಗಳನ್ನೂ ಈಗ ರದ್ದುಗೊಳಿಸಬಹುದು

ಪಿಒಎಸ್(ಪಾಯಿಂಟ್ ಆಫ್ ಸೇಲ್) ಮೂಲಕ ಕಾಯ್ದಿರಿಸಿದ ರೈಲ್ವೆ ಟಿಕೆಟ್ ಗಳನ್ನು ರದ್ದುಗೊಳಿಸುವ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಜಾರಿಗೆ ತಂದಿದೆ.
ರೈಲ್ವೆ ಟಿಕೆಟ್
ರೈಲ್ವೆ ಟಿಕೆಟ್
ನವದೆಹಲಿ: ಪಿಒಎಸ್(ಪಾಯಿಂಟ್ ಆಫ್ ಸೇಲ್) ಮೂಲಕ ಕಾಯ್ದಿರಿಸಿದ ರೈಲ್ವೆ ಟಿಕೆಟ್ ಗಳನ್ನು ರದ್ದುಗೊಳಿಸುವ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಜಾರಿಗೆ ತಂದಿದೆ. 
10,000 ಪಿಒಎಸ್ ಗಳನ್ನು ಟಿಕೆಟ್ ಕಾಯ್ದಿರಿಸುವ ಕೌಂಟರ್ ಗಳಲ್ಲಿ ಅಳವಡಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ನಗದು ರಹಿತ ವಹಿವಾಟನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮ ಕೈಗೊಂಡಿರುವ ಇಲಾಖೆ, ಈಗ ಪಿಒಎಸ್ ಮೂಲಕ ಕಾಯ್ದಿರಿಸಿದ ಟಿಕೆಟ್ ಗಳನ್ನು ರದ್ದುಗೊಳಿಸುವ ವ್ಯವಸ್ಥೆಯನ್ನೂ ಪರಿಚಯಿಸಿದೆ. 
ಎಸ್ ಬಿಐ ಪಿಒಎಸ್ ಮೂಲಕ ಟಿಕೆಟ್ ಕಾಯ್ದಿರಿಸುವ ಗ್ರಾಹಕರು ರೈಲ್ವೆ ಇಲಾಖೆಯ ಕೌಂಟರ್ ನ್ನು ಸಂಪರ್ಕಿಸಿ ಟಿಕೆಟ್ ನ್ನು ರದ್ದುಗೊಳಿಸಬಹುದಾಗಿದೆ. ಟಿಕೆಟ್ ರದ್ದುಗೊಳಿಸುವುದಕ್ಕೆ ಮತ್ತೊಮ್ಮೆ ಕಾರ್ಡ್ ಸ್ವೈಪ್ ಮಾಡುವ ಅಗತ್ಯವಿಲ್ಲ. 7 ದಿನಗಳ ಒಳಗಾಗಿ ಬ್ಯಾಂಕ್ ಖಾತೆಗೆ ಹಣ ಮರುಪಾವತಿಯಾಗಲಿದೆ. ಪಿಒಎಸ್ ಇಲ್ಲದೇ ಇರುವ ಪ್ರದೇಶಗಳಲ್ಲಿ ಹಣ ಮರುಪಾವತಿಗಾಗಿ ಟಿಕೆಟ್ ಡೆಪಾಸಿಟ್ ರಸೀದಿಯನ್ನು ನೀಡಲಾಗುವುದು  ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com