ಒಟ್ಟಿಗೆ ರಾಷ್ಟ್ರಗೀತೆ ಹಾಡಿ ವಿಶ್ವ ದಾಖಲೆ ನಿರ್ಮಿಸಿದ ಮೂರೂವರೆ ಲಕ್ಷ ಮಂದಿ

ಗುಜರಾತ್ ನ ರಾಜ್ ಕೋಟ್ ಜಿಲ್ಲೆಯ ಕಾವಗಾಡ್ ಎಂಬಲ್ಲಿ ಶನಿವಾರ ಮೂರೂವರೆ ಲಕ್ಷಕ್ಕೂ ಅಧಿಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಜ್ ಕೋಟ್: ಗುಜರಾತ್ ನ ರಾಜ್ ಕೋಟ್ ಜಿಲ್ಲೆಯ ಕಾವಗಾಡ್ ಎಂಬಲ್ಲಿ ಶನಿವಾರ ಮೂರೂವರೆ ಲಕ್ಷಕ್ಕೂ ಅಧಿಕ ಮಂದಿ ಒಟ್ಟಿಗೆ ರಾಷ್ಟ್ರಗೀತೆ ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿದ ಕೋದಲ್ ದಾಮ್ ದೇವಸ್ಥಾನದಲ್ಲಿ ಇಂದು ದೇವಿ ಕೊಡಿಯಾರ್ ಮೂರ್ತಿಯನ್ನು ಸ್ಥಾಪಿಸುವ ಸಮಯದಲ್ಲಿ ಈ ದಾಖಲೆಯನ್ನು ಜನರು ಮಾಡಿದ್ದಾರೆ.
ಗಿನ್ನೆಸ್ ವಿಶ್ವ ದಾಖಲೆಯ ವೀಕ್ಷಕರ ಸಮ್ಮುಖದಲ್ಲಿ ಮೂರ್ತಿ ಸ್ಥಾಪನೆ ಸಂದರ್ಭದಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಮಂದಿ ರಾಷ್ಟ್ರಗೀತೆಯನ್ನು ಒಟ್ಟಿಗೆ ಹಾಡಿದ್ದಾರೆ ಎಂದು ಕೋಡಲ್ ದಾಮ್ ದೇವಸ್ಥಾನದ ಸದಸ್ಯ ಹಂಸ್ ರಾಜ್ ಗಜೇರಾ ತಿಳಿಸಿದ್ದಾರೆ.
ಈ ಮುನ್ನ 2014ರಲ್ಲಿ ಬಾಂಗ್ಲಾದೇಶದಲ್ಲಿ 2,54,537 ಮಂದಿ ರಾಷ್ಟ್ರಗೀತೆಯನ್ನು ಹಾಡಿ ದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನು ಇಂದು ಮುರಿಯಲಾಯಿತು ಎಂದು ಗಜೇರಾ ತಿಳಿಸಿದ್ದಾರೆ.
ನಾವು ಗಿನ್ನೆಸ್ ವಿಶ್ವ ದಾಖಲೆ ಅಧಿಕಾರಿಗಳಿಂದ ಸರ್ಟಿಫಿಕೇಟ್ ಪಡೆದುಕೊಂಡಿದ್ದೇವೆ ಎಂದು ಅವರು ಹೇಳಿದರು.
ಅತಿ ಉದ್ದದ ಶೋಭ ಯಾತ್ರೆ(40 ಕಿಲೋ ಮೀಟರ್) ಮತ್ತು 1008 ಕುಂಡ ಮಹಾಯಜ್ಞ ಸಂಘಟನೆ ಮಾಡಿ ಟ್ರಸ್ಟ್ ಈ ಹಿಂದೆ ಲಿಮ್ಕಾ ಪುಸ್ತಕ ದಾಖಲೆ ಸೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com