ಅಮರ್ ಸಿಂಗ್
ದೇಶ
ರಾಮ್ ಗೋಪಾಲ್ ಯಾದವ್ ರಿಂದ ಜೀವ ಬೆದರಿಕೆಯಿದೆ: ಅಮರ್ ಸಿಂಗ್ ಆರೋಪ
ಸಮಾಜವಾದಿ ಪಕ್ಷದಲ್ಲಿನ ನಾಟಕ ಮುಗಿಯುವಂತೆ ಕಾಣುತ್ತಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ...
ವಾರಣಾಸಿ: ಸಮಾಜವಾದಿ ಪಕ್ಷದಲ್ಲಿನ ನಾಟಕ ಮುಗಿಯುವಂತೆ ಕಾಣುತ್ತಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಮಾವ ರಾಮ್ ಗೋಪಾಲ್ ಯಾದವ್ ಅವರಿಂದ ತಮಗೆ ಜೀವ ಬೆದರಿಕೆ ಬಂದಿದೆ ಎಂದು ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಆರೋಪಿಸಿದ್ದಾರೆ.
ಆಘಾತಕಾರಿ ಹೇಳಿಕೆಯಲ್ಲಿ ಸಮಾಜವಾದಿ ಪಕ್ಷದಿಂದ ವಜಾಗೊಂಡ ನಾಯಕ ಅಮರ್ ಸಿಂಗ್ ತಮ್ಮ ಜೀವ ಅಪಾಯದಲ್ಲಿದ್ದು, ತಮಗೆ ರಾಮ್ ಗೋಪಾಲ್ ಯಾದವ್ ಬಹಿರಂಗವಾಗಿ ಜೀವಬೆದರಿಕೆಯೊಡ್ಡಿದ್ದಾರೆ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ರಾಮ್ ಗೋಪಾಲ್ ಗುರಿಯಾಗಿಟ್ಟಿದ್ದಾರೆ. ಅವರು ಬಹಿರಂಗವಾಗಿ ನನಗೆ ಜೀವಬೆದರಿಕೆಯೊಡ್ಡಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅಮರ್ ಸಿಂಗ್ ಅವರನ್ನು ಸಹೋದರನಂತೆ ಪರಿಗಣಿಸಿದ್ದಾರೆ ಅವರು ಉತ್ತರ ಪ್ರದೇಶಕ್ಕೆ ಬಂದು ಸುರಕ್ಷಿತವಾಗಿ ಹಿಂತಿರುಗಲಿ ಎಂದು ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ ಎಂದು ಅಮರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಅಖಿಲೇಶ್ ತಮ್ಮನ್ನು ನಿರ್ಲಕ್ಷಿಸುವುದಕ್ಕೆ ಕೂಡ ಅಮರ್ ಸಿಂಗ್ ಕಿಡಿಕಾರಿದರು.

