ಗೋವಾ ಚುನಾವಣೆ: 40 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 250 ಅಭ್ಯರ್ಥಿಗಳು

ಪರಿಶೀಲನೆ ನಡೆಸಿ ಕೆಲವು ನಾಮಪತ್ರಗಳು ಹಿಂತೆಗೆದುಕೊಂಡ ನಂತರ ಗೋವಾ ರಾಜ್ಯದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಣಜಿ: ಪರಿಶೀಲನೆ ನಡೆಸಿ ಕೆಲವು ನಾಮಪತ್ರಗಳು ಹಿಂತೆಗೆದುಕೊಂಡ ನಂತರ ಗೋವಾ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಿಗೆ 250 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಲ್ಲಿ ಚುನಾವಣೆ ಫೆಬ್ರುವರಿ 4ರಂದು ನಡೆಯಲಿದೆ.
22 ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು  ಹಿಂತೆಗೆದುಕೊಂಡಿದ್ದಾರೆ. ನಾಮಪತ್ರ ಸಲ್ಲಿಸಿದ 405 ಅಭ್ಯರ್ಥಿಗಳ ಪೈಕಿ 272 ಮಂದಿ ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗಿತ್ತು. 
ಕಳೆದ 2012ರ ವಿಧಾನಸಭಾ ಚುನಾವಣೆಯಲ್ಲಿ 215 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.ಈ ಬಾರಿ ಕಾಂಗ್ರೆಸ್ 37 ಸ್ಥಾನಗಳಲ್ಲಿ, ಎನ್ ಸಿಪಿ 16 ಮತ್ತು ಎಂಜಿಪಿ-ಜಿಎಸ್ಎಮ್-ಶಿವ ಸೇನಾ ಮೈತ್ರಿಕೂಟಗಳು 26 ಮಂದಿ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕಿಳಿಸಿವೆ. ಈ ಬಾರಿ ಆಮ್ ಆದ್ಮಿ ಪಕ್ಷ ಅತಿ ಹೆಚ್ಚು 39 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
11 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ರಾಜ್ಯಾದ್ಯಂತ 1,649 ಮತಗಟ್ಟೆಗಳಿವೆ.
ಈ ಮಧ್ಯೆ, ಮುಖ್ಯ ಚುನಾವಣಾ ಆಯುಕ್ತ ಡಾ.ನಸೀಮ್ ಜೈದಿ ಮತ್ತು ಅವರ ತಂಡ ಚುನಾವಣಾ ಪೂರ್ವ ತಯಾರಿಗಳನ್ನು ಪರಿಶೀಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com