ಜಲ್ಲಿಕಟ್ಟು ವಿಧೇಯಕಕ್ಕೆ ತಮಿಳುನಾಡು ವಿಧಾಸಭೆಯಲ್ಲಿ ಸರ್ವಾನುಮತದ ಅಂಗೀಕಾರ

ಜಲ್ಲಿಕಟ್ಟು ಕ್ರೀಡೆ ನಡೆಸಲು ಸಾರ್ವಜನಿಕ ಪ್ರತಿಭಟನೆಗೆ ಮಣಿದಿರುವ ತಮಿಳುನಾಡು ಸರ್ಕಾರ, ವಿಧಾನಸಭೆಯಲ್ಲಿ ಜಲ್ಲಿಕಟ್ಟು ವಿಧೇಯಕವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಜಲ್ಲಿಕಟ್ಟು ವಿಧೇಯಕಕ್ಕೆ ತಮಿಳುನಾಡು ವಿಧಾಸಭೆಯಲ್ಲಿ ಒಮ್ಮತದ ಅಂಗೀಕಾರ
ಜಲ್ಲಿಕಟ್ಟು ವಿಧೇಯಕಕ್ಕೆ ತಮಿಳುನಾಡು ವಿಧಾಸಭೆಯಲ್ಲಿ ಒಮ್ಮತದ ಅಂಗೀಕಾರ
ಚೆನ್ನೈ: ಜಲ್ಲಿಕಟ್ಟು ಕ್ರೀಡೆ ನಡೆಸಲು ಸಾರ್ವಜನಿಕ ಪ್ರತಿಭಟನೆಗೆ ಮಣಿದಿರುವ ತಮಿಳುನಾಡು ಸರ್ಕಾರ, ವಿಧಾನಸಭೆಯಲ್ಲಿ ಜಲ್ಲಿಕಟ್ಟು ವಿಧೇಯಕವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. 
ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಸಿಎಂ ಪನ್ನೀರ್ ಸೆಲ್ವಂ ಜಲ್ಲಿಕಟ್ಟು ವಿಧೇಯಕವನ್ನು ಮಂಡನೆ ಮಾಡಿದ್ದರು. ಸಿಎಂ ಮಂಡಿಸಿದ ವಿಧೇಯಕಕ್ಕೆ ಒಮ್ಮತದ ಅಂಗೀಕಾರ ದೊರೆತಿದ್ದು, ಜಲ್ಲಿಕಟ್ಟು ಕ್ರೀಡೆ ನಡೆಸುವುದಕ್ಕೆ ಉಂಟಾಗಿದ್ದ ಕಾನೂನಾತ್ಮಕ ತೊಡಕಿಗೆ ಪರಿಹಾರ ದೊರೆತಿದೆ. ಜಲ್ಲಿಕಟ್ಟು ಮಸೂದೆಯನ್ನು ಅಂಗೀಕರಿಸಿರುವುದನ್ನು ಎಐಎಡಿಎಂಕೆ ಪಕ್ಷ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. 
ವಿಧೇಯಕ ಮಂಡನೆಗೂ ಮುನ್ನ  ಜಲ್ಲಿಕಟ್ಟು ಸಂಬಂಧ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. 

ಜಲ್ಲಿಕಟ್ಟು ಗೂಳಿಗೆ ಪೊಲೀಸ್ ಪೇದೆ ಬಲಿ

ವಿರುಧ್ ನಗರ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ ಗೂಳಿಗೆ ವಿ.ಶಂಕರ್ (29) ಎಂಬ ಪೊಲೀಸ್ ಪೇದೆ ಬಲಿಯಾಗಿದ್ದಾರೆ. ಗೂಳಿ ದಾಳಿಗೆ ಸಿಲುಕಿದ್ದ ಶಂಕರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು. ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಗೂಳಿಗಳು ಭಾಗವಸಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com