ಸಾಲ ಹಿಂತಿರುಗಿಸಲು ವಿಫಲ: ವಿಜಯ್ ಮಲ್ಯ ಸೇರಿ 11 ಮಂದಿ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಕೆ

ಕಿಂಗ್ ಫಿಶರ್ ಏರ್ ಲೈನ್ಸ್ ಮತ್ತು ವಿಜಯ್ ಮಲ್ಯ ಸೇರಿದಂತೆ 11 ಮಂದಿ ವಿರುದ್ಧ ಮುಂಬೈನ ವಿಶೇಷ ಸಿಬಿಐ...
ವಿಜಯ್ ಮಲ್ಯ
ವಿಜಯ್ ಮಲ್ಯ
Updated on
ನವದೆಹಲಿ: ಕಿಂಗ್ ಫಿಶರ್ ಏರ್ ಲೈನ್ಸ್ ಮತ್ತು ವಿಜಯ್ ಮಲ್ಯ ಸೇರಿದಂತೆ 11 ಮಂದಿ ವಿರುದ್ಧ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಸಿಬಿಐ ಆರೋಪಪಟ್ಟಿಯನ್ನು ಸಲ್ಲಿಸಿದೆ.
ನಿನ್ನೆ ಬಂಧಿಸಲಾಗಿದ್ದ 9 ಮಂದಿಯನ್ನು ಇಂದು ಸಿಬಿಆ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಸೂಚಿಸಿತು. ಅಲ್ಲದೆ ಸಿಬಿಐ 11 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.
ನಿನ್ನೆ ಸಿಬಿಐ ಐಡಿಬಿಐ ಬ್ಯಾಂಕ್ ಅಧ್ಯಕ್ಷ ಯೋಗೇಶ್ ಅಗರ್ವಾಲ್ ಮತ್ತು ಮಾಜಿ ಮುಖ್ಯ ಹಣಕಾಸು ಅಧಿಕಾರಿ ಎ.ರಘುನಾಥನ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿತ್ತು. ವಿಜಯ್ ಮಲ್ಯ ಅವರಿಂದ 9,000 ಕೋಟಿ ರೂಪಾಯಿ ಸಾಲವನ್ನು ವಶಪಡಿಸಿಕೊಳ್ಳಬೇಕಾಗಿದೆ.
ಐಡಿಬಿಐ ಬ್ಯಾಂಕಿನ ಕಾರ್ಯಕಾರಿಗಳಾದ ಒ.ವಿ.ಬುಂದೆಲ್ಲು, ಎಸ್.ಕೆ.ವಿ.ಶ್ರೀನಿವಾಸನ್ ಮತ್ತು ಆರ್ ಎಸ್ ಶ್ರೀಧರ್, ಕಿಂಗ್ ಫಿಶರ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮತ್ತು ಮೂವರು ಮಾಜಿ ನಿರ್ವಹಣಾಧಿಕಾರಿಗಳನ್ನು ಕೂಡ ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com