ಪಠ್ಯ ಪುಸ್ತಕ ಸೇರಲಿದೆ ಮೋದಿ ಸರ್ಕಾರದ ನೋಟ್ ಬ್ಯಾನ್ ವಿಷಯ

ಮುಂದಿನ ವರ್ಷದಿಂದ ಶಾಲಾ ಪಠ್ಯ ಪುಸ್ತಕಗಳಲ್ಲಿ ನರೇಂದ್ರ ಮೋದಿ ನವೆಂಬರ್ 8 ರಂದು ಜಾರಿಗೆ ತಂದ ನೋಟು ನಿಷೇಧ ವಿಷಯವನ್ನು ಅಳವಡಿಸಲಾಗುತ್ತದೆ ಎಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಜ್ಮೀರ್: ಮುಂದಿನ ವರ್ಷದಿಂದ ಶಾಲಾ ಪಠ್ಯ ಪುಸ್ತಕಗಳಲ್ಲಿ ನರೇಂದ್ರ ಮೋದಿ ನವೆಂಬರ್ 8 ರಂದು ಜಾರಿಗೆ ತಂದ ನೋಟು ನಿಷೇಧ ವಿಷಯವನ್ನು ಅಳವಡಿಸಲಾಗುತ್ತದೆ ಎಂದು ವರದಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ನೋಟ್ ಬ್ಯಾನ್ ವಿಷಯ ರಾಜಸ್ಥಾನ ಶಾಲಾ ಪಠ್ಯದಲ್ಲಿ ಇರಲಿದೆ.

ನೋಟ್ ಬ್ಯಾನ್ ನಿರ್ಧಾರ ಬಗ್ಗೆ ಪಠ್ಯದಲ್ಲಿ ಸೇರಿಸುವ ಮೂಲಕ ಮಕ್ಕಳಿಗೆ 'ಕ್ಯಾಸ್‌‌ಲೆಸ್‌ ಸಿಸ್ಟಮ್ ಹಾಗೂ ಮೊಬೈಲ್ ವ್ಯಾಲೆಟ್ ಸ್ಟ್ರಕ್ಚರ್' ಕುರಿತು ಮಾಹಿತಿ ನೀಡುವುದು ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಯ ಯೋಜನೆ ಆಗಿದೆ ಎಂದು ಆರ್ ಬಿಎಸ್ ಇ ಅಧ್ಯಕ್ಷ ಬಿಎಲ್ ಚೌಧುರಿ ಹೇಳಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿ ಪಠ್ಯದಲ್ಲಿ 'ನೋಟ್ ಬ್ಯಾನ್ ಹಾಗೂ ಕ್ಯಾಸ್‌ಲೆಸ್‌ ಎಕನಾಮಿ' ವಿಷಯನ್ನು ಸೇರ್ಪಡೆ ಮಾಡುವುದಾಗಿ ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿ ತಿಳಿಸಿದೆ.

ವಿದ್ಯಾರ್ಥಿಗಳಿಗೆ ನಗದು ರಹಿತ ವ್ಯವಸ್ಥೆ ಹಾಗೂ ಮೊಬೈಲ್ ವ್ಯಾಲೆಟ್ ಸ್ಟ್ರಕ್ಚರ್ ಬಗ್ಗೆ ಮಾಹಿತಿ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ನೋಟ್ ಬ್ಯಾನ್‌ನಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆಯೂ ವಿದ್ಯಾರ್ಥಿಗಳು ಅರಿಯಲಿದ್ದಾರೆ ಎಂದು ಬಿ.ಎಲ್.ಚೌಧರಿ ತಿಳಿಸಿದ್ದಾರೆ. ಶಿಕ್ಷಣ ಮಂಡಳಿ ಕಾರ್ಯವೈಖರಿಯನ್ನು ಕೂಡ ಬದಲಾಯಿಸಲಾಗುತ್ತಿದ್ದು, ಆನ್‌ಲೈನ್‌ ಮೂಲಕ ಎಲ್ಲ ಫೇಮೆಂಟ್‌ ಮಾಡುವ ವ್ಯವಸ್ಥೆಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com