ಗಡಿಯಲ್ಲಿ ಗೋಡೆಗೆ ಒಪ್ಪದಿದ್ದರೆ ಮೆಕ್ಸಿಕೋ ಭೇಟಿ ರದ್ದುಗೊಳಿಸಲಿರುವ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ ಒಪ್ಪದೇ ಇದ್ದರೆ ಭೇಟಿಯನ್ನು ರದ್ದುಗೊಳಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಾಣಕ್ಕೆ ಒಪ್ಪುವುದಿಲ್ಲ ಎಂದು ಮೆಕ್ಸಿಕೋ ಸ್ಪಷ್ಟಪಡಿಸಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ ಒಪ್ಪದೇ ಇದ್ದರೆ ಭೇಟಿಯನ್ನು ರದ್ದುಗೊಳಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಅತ್ಯಂತ ಅಗತ್ಯವಿರುವ ಗಡಿಯ ಗೋಡೆ ನಿರ್ಮಾಣಕ್ಕೆ ಮೆಕ್ಸಿಕೋ ಒಪ್ಪದೇ ಇದ್ದರೆ, ಮೆಕ್ಸಿಕೋ ಅಧ್ಯಕ್ಷರೊಂದಿಗಿನ ಮುಂಬರುವ ಭೇಟಿಯನ್ನು ರದ್ದುಗೊಳಿಸುವುದೇ ಸೂಕ್ತ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಮೆಕ್ಸಿಕೋದಿಂದ ಉಂಟಾಗುತ್ತಿರುವ ಅಕ್ರಮ ವಲಸೆಗೆ ಕಡಿವಾಣ ಹಾಕಲು ಟ್ರಂಪ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕ್ರಮಗಳನ್ನು ಘೋಷಿಸಿ ಆದೇಶ ಹೊರಡಿಸಿದ್ದರು. 
ಗಡಿಯಲ್ಲಿ ಬೃಹತ್ ಗೋಡೆ ನಿರ್ಮಾಣಕ್ಕೆ ಮೊದಲು ಅಮೆರಿಕ ಖರ್ಚನ್ನು ಭರಿಸುತ್ತದೆ, ಆದರೆ ನಂತರ ಅದನ್ನು ಮೆಕ್ಸಿಕೋ ವಾಪಸ್ ಕೊಡಬೇಕೆಂದು ಟ್ರಂಪ್ ಹೇಳಿದ್ದರು. ಆದರೆ ಈ ಪ್ರಸ್ತಾವನೆಗೆ ಮೆಕ್ಸಿಕೋ ಅಧ್ಯಕ್ಷ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಂಪ್ ಮೆಕ್ಸಿಕೋ ಭೇಟಿಯನ್ನು ರದ್ದುಗೊಳಿಸುವುದೇ ಸೂಕ್ತ ಎಂಬ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com