ಜಮ್ಮು: ಹಿಮಪಾತದಲ್ಲಿ ಸಿಲುಕಿದ್ದ ಕರ್ನಾಟಕದ ಸಂದೀಪ್ ಸೇರಿದಂತೆ 14 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುರೆಜ್ ವಲಯದಲ್ಲಿ ಸೇನಾ ಶಿಬಿರದ ಮೇಲೆ ಹಿಮಕುಸಿತದಿಂದಾಗಿ...
ಜಮ್ಮುವಿನಲ್ಲಿ ದಟ್ಟವಾಗಿ ಆವರಿಸಿದ ಹಿಮ(ಒಳ ಚಿತ್ರದಲ್ಲಿ ಹುತಾತ್ಮ ಯೋಧ ಸಂದೀಪ್ ಶೆಟ್ಟಿ)
ಜಮ್ಮುವಿನಲ್ಲಿ ದಟ್ಟವಾಗಿ ಆವರಿಸಿದ ಹಿಮ(ಒಳ ಚಿತ್ರದಲ್ಲಿ ಹುತಾತ್ಮ ಯೋಧ ಸಂದೀಪ್ ಶೆಟ್ಟಿ)
ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುರೆಜ್ ವಲಯದಲ್ಲಿ ಸೇನಾ ಶಿಬಿರದ ಮೇಲೆ ಹಿಮಕುಸಿತದಿಂದಾಗಿ ಹುತಾತ್ಮರಾದ ಯೋಧರ ಪೈಕಿ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿಯ ವೀರ ಯೋಧ ಸಂದೀಪ್ ಶೆಟ್ಟಿ ಸೇರಿದ್ದಾರೆ. ಈ ಮೂಲಕ ಹುತಾತ್ಮ ಯೋಧರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
ಸಂದೀಪ್ ಅವರಿಗೆ 2 ತಿಂಗಳ ಹಿಂದಷ್ಟೇ ಮದುವೆ ನಿಶ್ಚಿತಾರ್ಥವಾಗಿತ್ತು. ಮೊನ್ನೆ 25ರಂದು ಹಿಮಪಾತವಾಗುವುದಕ್ಕೆ ಕೆಲ ದಿನಗಳ ಹಿಂದೆ ಮನೆಯವರಿಗೆ ಕರೆ ಮಾಡಿ ಅಲ್ಲಿನ ದಟ್ಟ ಹಿಮ ಆವರಿಸಿದ ಬಗ್ಗೆ ತಿಳಿಸಿದ್ದರು. ಅವರ ಮದುವೆ ಫೆ.22 ರಂದು ನಡೆಯಬೇಕಿತ್ತು. ಇದೀಗ ಅವರ ವೀರ ಮರಣದಿಂದಾಗಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಅವರು 7-8 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದರು.
ಸಂದೀಪ್ ಹುತಾತ್ಮರಾದ ಬಗ್ಗೆ ಜಿಲ್ಲಾಡಳಿತಕ್ಕೆ ಇದುವರೆಗೆ ಮಾಹಿತಿ ಬಂದಿಲ್ಲ. ಗ್ರಾಮಸ್ಥರಿಂದ ವಿಷಯ ತಿಳಿದಿದೆ.
ಇನ್ನೊಬ್ಬ ಯೋಧ ಬೆಳಗಾವಿಯ ಶ್ರೀಹರಿ ಕೂಗಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಅಲ್ಲಿ ರಕ್ಷಣಾ ಕಾರ್ಯ ಅಂತ್ಯಗೊಂಡಿದೆ.
ನಿನ್ನೆ ಗುರೆಜ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ 10 ಮಂದಿ ಸೈನಿಕರ ಮೃತದೇಹಗಳು ಸಿಕ್ಕಿ 4 ಮಂದಿ ಕಣ್ಮರೆಯಾಗಿದ್ದರು. ಇಂದು ಆ 4 ಮಂದಿ ಯೋಧರ ಶವ ಪತ್ತೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com