ಆನಾಣ್ಯೀಕರಣ ಎಂಬುದು ಸುಳ್ಳು: ಇದರಿಂದ ಕಪ್ಪುಹಣ ಕೊಲ್ಲಲು ಸಾಧ್ಯವಿಲ್ಲ: ಚಿದಂಬರಂ

ಅನಾಣ್ಯೀಕರಣದಿಂದ ಕಪ್ಪು ಹಣ ಹಾಗೂ ಭ್ರಷ್ಟಾಚಾರ ಕಿತ್ತು ಹಾಕಬಹುದು ಎಂಬುದು ಸುಳ್ಳು ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ...
ಪಿ.ಚಿದಂಬರಂ
ಪಿ.ಚಿದಂಬರಂ

ಗುವಾಹಟಿ: ಅನಾಣ್ಯೀಕರಣದಿಂದ ಕಪ್ಪು ಹಣ ಹಾಗೂ ಭ್ರಷ್ಟಾಚಾರ ಕಿತ್ತು ಹಾಕಬಹುದು ಎಂಬುದು ಸುಳ್ಳು  ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ನವೆಂಬರ್ 8 ರಂದು ಮೋದಿ ಜಾರಿಗೆ ತಂದದ್ದು ನೋಟ್ ಬ್ಯಾನ್ ಅಲ್ಲ, ಅದು ನೋಟ್ ಬದ್ಲಿ ಎಂದು ಟೀಕಿಸಿದ್ದಾರೆ.

ನೋಟು ನಿಷೇಧದಿಂದ ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಾಶಪಡಿಸಲು ಸಾಧ್ಯವಿಲ್ಲ, ಈ ಮೊದಲು ಹಳೆಯ ನೋಟುಗಳಲ್ಲಿ ಲಂಚ ಪಡೆಯುತ್ತಿದ್ದರು, ಈಗ ಹೊಸ ನೋಟುಗಳಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಗುವಾಹಟಿಯಲ್ಲಿ ನಡೆದ ನೋಟು ನಿಷೇಧದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅನರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ,. ಮುಂದಿನ ಸಾರಿ ನಾನು ತಹಶೀಲ್ದಾರ್ ಕಚೇರಿಗೆ ಹೋದಾಗ ಅವರು ನನ್ನ ಬಳಿ ಲಂಚ ಕೇಳುವುದಿಲ್ಲ ಎಂಬ ಭರವಸೆ ನೀಡಲಿ ಎಂದು ಮೋದಿ ಅವರಿಗೆ ಕೇಳಿದ್ದಾರೆ. ಜೊತೆಗೆ ದೇಶದ 132 ಕೋಟಿ ಜನರಲ್ಲಿ ಯಾರೋಬ್ಬರು ಲಂಚ ಕೇಳುವುದಿಲ್ಲ ಎಂಬ ಭರವಸೆ ನೀಡಲಿ ಎಂದು ಮೋದಿಗೆ ಸವಾಲು ಹಾಕಿದ್ದಾರೆ.

ಸೆಪ್ಟಂಬರ್ 4 ರಂದು ಡಾ. ಉರ್ಜಿತ್ ಪಟೇಲ್ ಆರ್ ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ 64 ದಿನಗಳಲ್ಲಿ ಸರ್ಕಾರದ ನೋಟು ನಿಷೇಧ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಈ ಹಿಂದಿನ 7 ಆರ್ ಬಿ ಐ ಗವರ್ನರ್ ಗಳಲ್ಲಿ ಯಾರೋಬ್ಬರು ಅನಾಣ್ಯೀಕರಕ್ಕೆ ಶಿಫಾರಸು ಮಾಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com