ಭಾರತೀಯ-ಅಮೆರಿಕನ್ ಗೂ ತಟ್ಟಿದ ಟ್ರಂಪ್ ಕಠಿಣ ವಲಸೆ ನೀತಿ: ವಲಸೆ ಬಗ್ಗೆ ಪ್ರಶ್ನೆಗಳ ಸುರಿಮಳೆ!

ಇಸ್ಲಾಮಿಕ್ ಮೂಲಭೂತವಾದಿಗಳನ್ನು ಅಮೆರಿಕಾದಿಂದ ಹೊರಗಿಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ ಭಾರತೀಯ-ಅಮೆರಿಕನ್ನರಿಗೂ ತಟ್ಟಿದೆ.
ಭಾರತೀಯ-ಅಮೆರಿಕನ್ ಗೂ ತಟ್ಟಿದ ಟ್ರಂಪ್ ಕಠಿಣ ವಲಸೆ ನೀತಿ: ವಲಸೆ ಬಗ್ಗೆ ಪ್ರಶ್ನೆಗಳ ಸುರಿಮಳೆ!
ಭಾರತೀಯ-ಅಮೆರಿಕನ್ ಗೂ ತಟ್ಟಿದ ಟ್ರಂಪ್ ಕಠಿಣ ವಲಸೆ ನೀತಿ: ವಲಸೆ ಬಗ್ಗೆ ಪ್ರಶ್ನೆಗಳ ಸುರಿಮಳೆ!
ನ್ಯೂಯಾರ್ಕ್: ಇಸ್ಲಾಮಿಕ್ ಮೂಲಭೂತವಾದಿಗಳನ್ನು ಅಮೆರಿಕಾದಿಂದ ಹೊರಗಿಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ ಭಾರತೀಯ-ಅಮೆರಿಕನ್ನರಿಗೂ ತಟ್ಟಿದೆ. 
ಶಾರೂಖ್ ಖಾನ್ ಅವರ ಸ್ವದೇಶ್ ಸಿನಿಮಾಗೆ ಸ್ಪೂರ್ತಿಯಾಗಿದ್ದ ದಂಪತಿಗಳಿಗೆ ಟ್ರಂಪ್ ನ ಕಠಿಣ ವಲಸೆ ನೀತಿಯ ಬಿಸಿ ತಟ್ಟಿದ್ದು, ಅರವಿಂದ ಪಿಲ್ಲಾಲಮರಿ ದಂಪತಿಗಳನ್ನು ಪೊಲೀಸರು "ನೀವು ಅಕ್ರಮ ವಲಸಿಗರಾ? ಎಂದು ಪ್ರಶ್ನಿಸಿ ಪರಿಶೀಲನೆ ನಡೆಸಿದ್ದಾರೆ. 
ಅರವಿಂದ ಪಿಲ್ಲಾಲಮರಿ ಕಳೆದ 30 ವರ್ಷಗಳಿಂದ ಅಮೆರಿಕ ಪ್ರಜೆಗಳಾಗಿದ್ದು, ಬೆಲ್ ಏರ್ ನಲ್ಲಿ ವಾಸಿಸುತ್ತಿದ್ದಾರೆ. ಅರವಿಂದ ಪಿಲ್ಲಾಲಮರಿ ಪತ್ನಿ ಭಾರತದಲ್ಲೇ ಜನಿಸಿದವರಾಗಿದ್ದು, ಕೆಲವು ವರ್ಷಗಳ ನಂತರ ಪೋಷಕರೊಂದಿಗೆ ಅಮೆರಿಕಾಗೆ ತೆರಳಿದ್ದರು. ಅರವಿಂದ ಪಿಲ್ಲಾಲಮರಿ ಪತ್ನಿಗೆ ಅಮೆರಿಕ ಪೊಲೀಸರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಷ್ಟೇ ಅಲ್ಲದೇ ಅವರ ಬಗ್ಗೆ ಕ್ರಿಮಿನಲ್ ತನಿಖೆ ನಡೆಯುತ್ತಿರುವುದರಿಂದ ಸ್ವತಂತ್ರವಾಗಿ ಎಲ್ಲಿಗೂ ಹೋಗುವಂತಿಲ್ಲ ಎಂದೂ ಹೇಳಿದ್ದಾರೆ. 
ನಡೆದು ಹೋಗುತ್ತಿದ್ದ ಪಿಲ್ಲಾಲಮರಿ ಪತ್ನಿಯನ್ನು ತಡೆದು ನಿಲ್ಲಿಸಿದ ಪೊಲೀಸರು "ನಿಮ್ಮ ಬಳಿ ಗುರುತಿನ ಚೀಟಿ ಏಕೆ ಇಲ್ಲ? ನೀವು ಇಲ್ಲಿ ಅಕ್ರಮವಾಗಿ ನೆಲೆಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ನಂತರ ದಾಖಲೆಗಳನ್ನು ಪರಿಶೀಲಿಸಿದಾಗ ಅವರು ಅಮೆರಿಕಾದ ಪ್ರಜೆ ಎಂಬುದು ಖಾತ್ರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರವಿಂದ ಪಿಲ್ಲಾಲಮರಿ ಪತ್ನಿ, ಸಾರ್ವಜನಿಕ ಭದ್ರತೆ ಎಂಬುದು ನಾಗರಿಕ ಹಕ್ಕಿಗೆ ಧಕ್ಕೆಯಾಗಬಾರದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com