ಮುಸ್ಲಿಂ ವಲಸಿಗರಿಗೆ ಅಮೆರಿಕ ಪ್ರವೇಶಕ್ಕೆನಿಷೇಧ : ಟ್ರಂಪ್ ನೀತಿಗೆ ಜೆಡಿಯು ಸ್ವಾಗತ

ಏಳು ಮುಸ್ಲಿಂ ರಾಷ್ಟ್ರಗಳಿಂದ ಅಮೆರಿಕ ಪ್ರವೇಶಕ್ಕೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿರುವ ವಲಸೆ ನೀತಿಯನ್ನು...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ನವದೆಹಲಿ: ಏಳು ಮುಸ್ಲಿಂ ರಾಷ್ಟ್ರಗಳಿಂದ ಅಮೆರಿಕ ಪ್ರವೇಶಕ್ಕೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿರುವ ವಲಸೆ ನೀತಿಯನ್ನು ಜೆಡಿಯು ಸ್ವಾಗತಿಸಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರದಿಂದ ಭಯೋತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ಜೆಡಿಯು ಮುಖಂಡ ಪವನ್ ವರ್ಮಾ ಹೇಳಿದ್ದಾರೆ.

ಭಯೋತ್ಪಾದನೆ ಪೋಷಿಸುತ್ತಿರುವ ಪಾಕಿಸ್ತಾನವನ್ನು ವಿರೋಧಿಸುತ್ತಿರುವ ರಾಷ್ಟ್ರ ಅಮೆರಿಕಾವಾಗಿದೆ. ಹೆಚ್ಚುತ್ತಿರುವ ಪಾಕಿಸ್ತಾನ ಭಯೋತ್ಪಾದನೆಗೆ ಟ್ರಂಪ್ ನೀಡಿರುವ ಪೆಟ್ಟಿನಿಂದ ಉಗ್ರವಾದ ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಇನ್ನೂ ಟ್ರಂಪ್ ಮುಸ್ಲಿಮರಿಗೆ ನಿಷೇಧ ಹೇರಿರುವುದನ್ನು ಕಾಂಗ್ರೆಸ್ ವಿರೋಧಿಸಿದೆ. ದೇಶದ ಎಲ್ಲಾ ಜನತೆ ಅಪಾಯಕಾರಿ ಎಂದು ಹೇಳಲಾಗುವುದಿಲ್ಲ, ಅನುಮಾನ ಬಂದವರ ಮೇಲೆ ಹದ್ದಿನ ಕಣ್ಣಿಟ್ಟು ಪರಿಶೀಲನೆ ನಡೆಸಬೇಕು. ಅದು ಬಿಟ್ಟು ನಿಷೇಧ ಹೇರುವುದು ತಪ್ಪು ಎಂದು ಕಾಂಗ್ರೆಸ್ ಮುಖಂಡ ಶಕೀಲ್ ಅಹಮದ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಇದೊಂದು ಅಂತಾರಾಷ್ಟ್ರೀಯ ವಿವಾದವಾಗಿದ್ದು, ವಿದೇಶಾಂಗ ಇಲಾಖೆಗಳು ಈ ಸಂಬಂಧ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ. ಏಳು ಮುಸ್ಲಿಂ ರಾಷ್ಟ್ರಗಳಿಂದ ಬರುವ ಜನತೆಗೆ ಅಮೆರಿಕಾಗೆ ನಿಷೇಧ ಹೇರುವ ಆದೇಶಕ್ಕೆ ನಿನ್ನೆ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com