ದೆಹಲಿ ಪೊಲೀಸರಿಂದ ಕಿರುಕುಳ; ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ನಜೀಬ್ ಪೋಷಕರ ಆರೋಪ

ದೆಹಲಿ ಪೊಲೀಸರು ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್...
ನಜೀಬ್ ಅಹ್ಮದ್ ತಾಯಿ
ನಜೀಬ್ ಅಹ್ಮದ್ ತಾಯಿ

ನವದೆಹಲಿ: ದೆಹಲಿ ಪೊಲೀಸರು ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಕುಟುಂಬ ಆರೋಪಿಸಿದೆ.

ಇಂದು ಬೆಳಗ್ಗೆ 4 ಗಂಟೆಗೆ ಬದೌನ್ ನಲ್ಲಿರುವ ನಮ್ಮ ಮನೆಗೆ  ಸುಮಾರು 50 ಪೊಲೀಸ್ ಸಿಬ್ಬಂದಿ ಶೋಧದ ನೆಪದಲ್ಲಿ ಬಲವಂತವಾಗಿ ಮನೆಗೆ ನುಗ್ಗಿದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮನೆಗೆ ಬಂದ ಪೊಲೀಸರು ಮನೆಯ ಒಳಗಡೆ ಫೋಟೋ ತೆಗೆದು ವಿಡಿಯೋ ಮಾಡಿದ್ದಾರೆ. ಮನೆಯ ಪ್ರತಿಯೊಂದು ಸ್ಥಳವನ್ನು ಪರಿಶೀಲಿಸಿ, ಮನೆಯ ಸದಸ್ಯರಿಗೆ ನಜೀಬ್ ಎಲ್ಲಿದ್ದಾನೆ ಎಂದು ಹೇಳಬೇಕೆಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ನಜೀಬ್ ನ 90 ವರ್ಷದ ಅಜ್ಜನಿಗೂ ಕೂಡ ಅವರುಕಿರುಕುಳ ನೀಡಿದ್ದಾರೆ. ಆದರೆ ದೆಹಲಿ ಪೊಲೀಸರು ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ.

ನಜೀಬ್ ನಾಪತ್ತೆ ಸಂಬಂಧ ಶೋಧ ಕಾರ್ಯ ಮುಂದುವರಿದಿದೆ. ಆತನ ಸಂಬಂಧಿಕರು ಮತ್ತು ಸ್ನೇಹಿತರಿಗೆ ನೊಟೀಸ್ ನೀಡಿ ಅವರ ಮನೆಗಳಿಲ್ಲಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇಲಾಖೆಯ ಪ್ರಕ್ರಿಯೆಯಂತೆ ವಿಡಿಯೋ ರೆಕಾರ್ಡ್ ಮಾಡಲಾಗಿದೆ, ನಜೀಬ್ ಪೋಷಕರು ಆರೋಪ ಆಧಾರರಹಿತವಾದದ್ದು ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com