ವೃದ್ಧೆಯ ರಕ್ಷಣೆಗೆ ಬಂದ ಕೋರ್ಟ್: ಮನೆಬಿಟ್ಟು ಹೋಗುವಂತೆ ಮಗ ಸೊಸೆಗೆ ಛೀಮಾರಿ

74 ವರ್ಷದ ವೃದ್ಧ ವಿಧವೆ ಮಹಿಳೆಯ ನೆರವಿಗೆ ಧಾವಿಸಿರುವ ದೆಹಲಿ ಕೋರ್ಟ್ ಆಕೆಯ ಮನೆ ಬಿಟ್ಟು ಹೋಗುವಂತೆ ಮಗನಿಗೆ ಸೂಚಿಸಿದೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 74 ವರ್ಷದ ವೃದ್ಧ ವಿಧವೆ ಮಹಿಳೆಯ ನೆರವಿಗೆ ಧಾವಿಸಿರುವ ದೆಹಲಿ ಕೋರ್ಟ್ ಆಕೆಯ ಮನೆ ಬಿಟ್ಟು ಹೋಗುವಂತೆ ಮಗನಿಗೆ ಸೂಚಿಸಿದೆ.

ಕೌಟುಂಬಿಕ  ಹಿಂಸಾಚಾರ ಹಾಗೂ ವರದಕ್ಷಿಣೆ ಕಾನೂನಿನ ದುರುಪಯೋಗ ಮತ್ತು ವಯಸ್ಸಾದ ಪೋಷಕರ ಮೇಲೆ ದೌರ್ಜನ್ಯ ಮಾಡುತ್ತಿರುವ ವೃದ್ಧ ಮಹಿಳೆಯ ಮಗ ಮತ್ತು ಸೊಸೆಯನ್ನು ಮನೆಬಿಟ್ಟು ಹೋಗುವಂತೆ ಕೋರ್ಟ್ ನಿರ್ದೇಶಿಸಿದೆ.

ಜೀವನ ಎಂಬುದು ಏಣಿಯಲ್ಲ, ಆದರೆ  ಅದೊಂದು ಚಕ್ರ, ಯಾವಾಗಲು ಪೂರ್ಣವಾಗಿ ಸುತ್ತುತ್ತಾ ಇರುತ್ತದೆ. ವಯಸ್ಸಾದವರನ್ನು ಅವರಿಗೆ ಬೇಕಾದವರು ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಪರಿತ್ಯಕ್ತ ಮಾಡುವುದಕ್ಕೆ ಕೋರ್ಟ್ ನ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಪೋಷಕರ ವಿರುದ್ಧ ಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳು ಸೂಕ್ತವಲ್ಲ ಮತ್ತು ಕಾನೂನು ಬಾಹಿರ ಎಂದು ಹೆಚ್ಚುವರಿ ಜಿಲ್ಲಾ ಮುಖ್ಯ ನ್ಯಾಯಮೂರ್ತಿ ಕಾಮಿನಿ ಲಾವ್ ಹೇಳಿದ್ದಾರೆ. ನಾವು ನಮ್ಮ ಪೋಷಕರ ಬಗ್ಗೆ ಕೇರ್ ಮಾಡುವುದನ್ನು ಮರೆತರೆ ನಮ್ಮ ಮಕ್ಕಳು ನಮ್ಮನ್ನು ಕೇರ್ ಮಾಡುವುದಿಲ್ಲ, ಅವರ ವಯಸ್ಸಿಗೆ ಮತ್ತಳ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರ ದೆಹಲಿಯ ಶಾಂತಿ ದೇವಿ ಎಂಬ ಮಹಿಳೆ ತನ್ನ ಹೆಸರಲ್ಲಿರುವ ಎರಡು ಆಸ್ತಿಗಳ ತನ್ನ ಸ್ವಾಧಿನಕ್ಕೆ ಕೊಡಿಸಿ, ಮಗ ಹಾಗೂ ಸೊಸೆ ಶಾಂತಿಯುತವಾಗಿ ಮನೆ ಬಿಟ್ಟು ಹೋಗುವಂತೆ ದೆಹಲಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

ಆಕೆ ಮನವಿ ಸಲ್ಲಿಸಿದ್ದ ದಿನಾಂಕ ಅಕ್ಟೋಬರ್ 2015 ರಿಂದ ಪ್ರತಿ ತಿಂಗಳಿಗೆ 5 ಸಾವಿರದಂತೆ ಆಸ್ತಿಯನ್ನು ಆಕೆಯ ಸ್ವಾಧೀನಕ್ಕೆ ನೀಡುವವರೆಗೆ ಹಣ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

ವೃದ್ಧ ಮಹಿಳೆಗೆ ಆಕೆಯ ಪುತ್ರ ಹಾಗೂ ಸೊಸೆ ಕಿರುಕುಳ, ನಿಂದನೆ ಮಾಡಿದ್ದಾರೆ. ಈ ಸಂಬಂಧ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಸ್ತಿಗಾಗಿ ದಂಪತಿ ಈ ಕೆಲಸ ಮಾಡಿದ್ದಾರೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಇದು ಶಾಂತಿದೇವಿ ಅವರೊಬ್ಬರ ಕಥೆಯಲ್ಲ, ದಿನದಲ್ಲಿ ಸಾವಿರಾರು ಹಿರಿಯ ನಾಗರಿಕರು ಇಂಥಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ನಮ್ಮ ಪೋಷಕರಿಗೆ ಹಾಗೂ ಹಿರಿಯರನ್ನು ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯ ಎಂದು ಜಡ್ಜ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com