ಮೃತ ಕಾರ್ಮಿಕರನ್ನು ಹೊರತೆಗೆಯುತ್ತಿರುವುದು
ದೇಶ
ಲಾತೂರ್: ಎಣ್ಣೆ ಗಿರಣಿಯ ರಾಸಾಯನಿಕ ಟ್ಯಾಂಕ್ ನಲ್ಲಿ ಉಸಿರುಗಟ್ಟಿ 9 ಕಾರ್ಮಿಕರು ಸಾವು
ಇಲ್ಲಿನ ಎಂ.ಐ.ಡಿ.ಸಿ ಕೀರ್ತಿ ಎಣ್ಣೆ ಗಿರಣಿಯ ರಾಸಾಯನಿಕ ಟ್ಯಾಂಕ್ ನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ...
ಲಾತೂರ್(ಮಹಾರಾಷ್ಟ್ರ): ಇಲ್ಲಿನ ಎಂ.ಐ.ಡಿ.ಸಿ ಕೀರ್ತಿ ಎಣ್ಣೆ ಗಿರಣಿಯ ರಾಸಾಯನಿಕ ಟ್ಯಾಂಕ್ ನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ 9 ಮಂದಿ ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ನಾಲ್ವರು ಕಾರ್ಮಿಕರು ಟ್ಯಾಂಕ್ ನ್ನು ಸ್ವಚ್ಛಗೊಳಿಸಲೆಂದು ಇಳಿದವರು ಎಷ್ಟು ಹೊತ್ತಾದರೂ ಮೇಲೆ ಬರಲಿಲ್ಲ. ಆಗ ಗಿರಣಿಯ ಅಧಿಕಾರಿಗಳು ಇತರ ಐವರು ಕಾರ್ಮಿಕರನ್ನು ಹುಡುಕಲೆಂದು ಕಳುಹಿಸಿದರು. ಆ ಕಾರ್ಮಿಕರು ಕೂಡ ಎಷ್ಟು ಹೊತ್ತಾದರೂ ಬಾರದಿದ್ದಾಗ ಅಧಿಕಾರಿಗಳು ಸ್ಥಳಕ್ಕೆ ಹೋಗಿ ನೋಡಿದಾಗ ಕಾರ್ಮಿಕರು ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂತು.
ಕಾರ್ಮಿಕರನ್ನು ಟ್ಯಾಂಕ್ ನಿಂದ ಹೊರತೆಗೆಯಲು ಸಾಮೂಹಿಕ ರಕ್ಷಣಾ ಕಾರ್ಯ ನಡೆಸಲಾಯಿತಾದರೂ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಮೃತದೇಹವನ್ನು ಹೊರತೆಗೆಯಲು ರಾಸಾಯನಿಕ ಟ್ಯಾಂಕಿನ್ನು ನಾಶಪಡಿಸಬೇಕಾಗಿ ಬಂತು.
ಪರಿಸ್ಥಿತಿಯ ಪರಾಮರ್ಶೆ ನಡೆಸಲು ಕಾರ್ಮಿಕ ಸಚಿವ ಸಂಭಾಜಿ ಪಾಟೀಲ್ ನೀಲಂಗೆಕರ್ ಸ್ಥಳಕ್ಕೆ ಧಾವಿಸಿದರು.
ಗಿರಣಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೃತಪಟ್ಟವರ ಕುಟುಂಬದವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ