ನಿರ್ಗತಿಕರು, ಬಡವರು, ಅವಕಾಶವಂಚಿತರ ಉದ್ಧಾರಕ್ಕೆ ಅಹ್ಮದ್ ಅವರು ದಣಿವರಿಯದೆ ಚಳವಳಿ ನಡೆಸುತ್ತಿದ್ದರು. ಅವರ ಸೇವೆಯನ್ನು ದೇಶ ದೀರ್ಘಕಾಲದವರೆಗೆ ಸ್ಮರಿಸುತ್ತದೆ. ಸುದೀರ್ಘ ವರ್ಷಗಳವರೆಗೆ ಸ್ನೇಹಿತ ಮತ್ತು ಸಹೋದ್ಯೋಗಿಯಾಗಿದ್ದ ಸಂಸದ ಇ ಅಹ್ಮದ್ ನಿಧನಕ್ಕೆ ಹೃದಯಪೂರ್ವಕ ಸಂತಾಪಗಳು ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.